ಹಬ್ಬಗಳು ಬಂತು ಅಂದ್ರೆ ಎಲ್ಲಾ ಮನೆಯಲ್ಲಿ ಸಡಗರ ಸಂಭ್ರಮದ ಜೊತೆ ಸಿಹಿ ಭಕ್ಷ್ಯಗಳ ಭೋಜನ ಇದ್ದೇ ಇರುತ್ತದೆ. ಸಿನಿ ತಾರೆಯರ ಮನೆಯಲ್ಲಂತೂ ಕೇಳಂಗೇ ಇಲ್ಲ. ಹೊಸ ಉಡುಪು ತೊಟ್ಟು, ಸಿಹಿ ಹಂಚಿ, ಮನೆ ಮಂದಿ ಎಲ್ಲ ನಲಿದು ಹಬ್ಬದ ಮೆರುಗನ್ನು ಹೆಚ್ಚಿಸುತ್ತಾರೆ. ಆದ್ರೆ, ಈ ದೀಪಾವಳಿಯಂದು ನಟಿ ರಶ್ಮಿಕಾ ಮಂದಣ್ಣಗೆ ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಹಲ್ವಾ ತಿನ್ನಿಸಿದ್ದಾರೆ.
ಅರೇ ಏನಿದು ಹಲ್ವಾ ತಿನ್ಸಿದ್ರಾ ಅಂತಾ ಶಾಕ್ ಆಗ್ಬೇಕಿಲ್ಲ.. ಉಪಾಸನಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಕ್ಯಾರೆಟ್ ಹಲ್ವಾ ಮಾಡೋದನ್ನ ವೀಕ್ಷಕರಿಗೆ ಹೇಳಿಕೊಟ್ಟಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ಉಪಾಸನ ಯೂಟ್ಯೂಬ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಿಮಿಸಿದ್ದ ರಶ್ಮಿಕಾ ಮಂದಣ್ಣ, ಉಪಾಸನಾ ಜೊತೆ ಸೇರಿ ಹಲ್ವಾ ಮಾಡಿ ತಿಂದು ಎಂಜಾಯ್ ಮಾಡಿದ್ದಾರೆ.