ಕರ್ನಾಟಕ

karnataka

ETV Bharat / sitara

ಅಲ್ಲು ಅರ್ಜುನ್​​ ಜೊತೆ ರೊಮ್ಯಾನ್ಸ್ ಮಾಡಲಿದ್ದಾರಾ ರಶ್ಮಿಕಾ? - undefined

ಪ್ರಿಯಾಮಣಿ ಮದುವೆಯಾದ ನಂತರ ಆ್ಯಕ್ಟಿಂಗ್​​​ನಿಂದ ದೂರ ಉಳಿದಿದ್ದರು. ಇದೀಗ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಅವರೊಂದಿಗೆ ತೆಲುಗು ಸಿನಿಮಾವೊಂದರಲ್ಲಿ ನಟಿಸುವ ಮೂಲಕ ಪ್ರಿಯಾ ಮತ್ತೆ ಆ್ಯಕ್ಟಿಂಗ್​​​ಗೆ ವಾಪಸಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್​​, ರಶ್ಮಿಕಾ ಮಂದಣ್ಣ

By

Published : Feb 8, 2019, 11:21 AM IST

ಟಾಲಿವುಡ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್,​ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸುತ್ತಿರುವ ತಮ್ಮ ಮುಂದಿನ ಸಿನಿಮಾಗೆ ತಯಾರಾಗುತ್ತಿದ್ದಾರೆ. ಸಿನಿಮಾಗೆ ಇನ್ನೂ ಹೆಸರು ಕೂಡಾ ಫೈನಲ್ ಆಗಿಲ್ಲ.

ಇನ್ನು ಟೈಟಲ್ ಮಾತ್ರವಲ್ಲದೆ ಚಿತ್ರದ ನಾಯಕಿ ಕೂಡಾ ಯಾರು ಎಂಬುದು ಇನ್ನೂ ಆಯ್ಕೆ ಆಗಿಲ್ಲ. ಚಿತ್ರತಂಡ ಈ ಸಿನಿಮಾಗೆ ಕೈರಾ ಅಡ್ವಾಣಿ ಅವರ ಹೆಸರನ್ನು ಫೈನಲ್ ಮಾಡಿತ್ತು. ಆದರೆ ಟಾಲಿವುಡ್ ಸಿನಿಕರಿಯರ್​​​ನಿಂದ ಕೈರಾ ಸ್ವಲ್ಪ ದಿನಗಳ ಮಟ್ಟಿಗೆ ಬ್ರೇಕ್​ ಪಡೆಯಲು ನಿರ್ಧರಿಸಿರುವ ಕಾರಣ ಅವರ ಹೆಸರನ್ನು ಕೈ ಬಿಡಲಾಗಿದೆ.

ರಶ್ಮಿಕಾ ಮಂದಣ್ಣ

ಕೈರಾ ನಂತರ ಸಮಂತ ಅಥವಾ ಕೀರ್ತಿ ಸುರೇಶ್​​​ ಅವರನ್ನು ಸಿನಿಮಾಗೆ ನಾಯಕಿಯನ್ನಾಗಿ ಆಯ್ಕೆ ಮಾಡಲು ನಿರ್ದೇಶಕ ತ್ರಿವಿಕ್ರಮ್ ಯೋಚಿಸಿದ್ದರು ಎನ್ನಲಾಗಿದೆ. ಆದರೆ ಇದೀಗ ರಶ್ಮಿಕಾ ಮಂದಣ್ಣ ಹೆಸರು ಕೇಳಿಬರುತ್ತಿದೆ. ಚಲೋ, ಗೀತಗೋವಿಂದಂ, ದೇವ್​ದಾಸ್ ಸಿನಿಮಾಗಳ ಯಶಸ್ವಿ ರಶ್ಮಿಕಾಗೆ ಟಾಲಿವುಡ್​​ನಲ್ಲಿ ಅವಕಾಶಗಳ ಸುರಿಮಳೆಯನ್ನೇ ಸುರಿಸುತ್ತಿದೆ.

ಅಲ್ಲು ಅರ್ಜುನ್​​

ಇನ್ನು ಅಲ್ಲು ಅರ್ಜುನ್ ಕೂಡಾ ಗೀತಗೋವಿಂದಂ ನೋಡಿ ಬಹಳ ಇಂಪ್ರೆಸ್ ಆಗಿದ್ದು, ರಶ್ಮಿಕಾಗೆ ತನ್ನೊಂದಿಗೆ ನಟಿಸಲು ಅವಕಾಶ ನೀಡಲು ಬಯಸುತ್ತಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ಮಾತುಕತೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಅಲ್ಲು ಅರ್ಜುನ್ ಜೊತೆ ರೊಮ್ಯಾನ್ಸ್ ಮಾಡುವವರು ಯಾರು ಎಂಬುದು ಫೈನಲ್ ಆಗಲಿದೆ.

For All Latest Updates

TAGGED:

ABOUT THE AUTHOR

...view details