ಇತ್ತೀಚೆಗೆ ನವೆಂಬರ್ 20 ರಿಂದ 28ರವರೆಗೆ ಗೋವಾದಲ್ಲಿ 50ನೇ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಜರುಗಿತು. ಈ ಫೆಸ್ಟಿವಲ್ನಲ್ಲಿ 75 ದೇಶಗಳ ಸುಮಾರು 250 ಸಿನಿಮಾಗಳನ್ನು ಪ್ರದರ್ಶನ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ನಟ ಯಶ್ ಮತ್ತು ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದರು.
ಯಾರ ಮುಖದಲ್ಲಾದ್ರೂ ನಗು ಅರಳಿಸ್ಬೇಕಾದ್ರೆ ಹೀಗ್ ಮಾಡ್ಬೇಕಂತೆ: ಇದು ರಶ್ಮಿಕಾ ಟಿಪ್ಸ್ - ಗೋವಾ ಫಿಲ್ಮ್ ಫೆಸ್ಟಿವಲ್
ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ್ದ ಪೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ನಿಮ್ಮ ಮುಂದೆ ಯಾರಾದರೂ ನಗುವಿಲ್ಲದೆ ಬೇಸರದಿಂದಿದ್ದರೆ ನಿಮ್ಮ ನಗುವನ್ನು ಅವರಿಗೆ ಕೊಡಿ. ಅಂದ್ರೆ ನೀವು ಕೂಡ ನಕ್ಕುಬಿಡಿ ಎನ್ನುವ ಡಾಲಿ ಪಾರ್ಟೊನ್ ವ್ಯಾಖ್ಯಾನವನ್ನು ಬರೆದಿದ್ದಾರೆ.
ರಶ್ಮಿಕಾ ಮಂದಣ್ಣ ಕೊಟ್ರು ನಗಿಸೋ ಟಿಪ್ಸ್
ಈ ನೆನಪುಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಸಮಾರಂಭದಲ್ಲಿ ತಾವು ಮಿಂಚಿದ ಫೋಟೋ ಶೇರ್ ಮಾಡಿದ್ದಾರೆ.
ಈ ಫೋಟೋ ಹಾಕಿ ಕ್ಯಾಪ್ಶನ್ ಕೊಟ್ಟಿರುವ ರಶ್ಮೀಕಾ, ನಿಮ್ಮ ಮುಂದೆ ಯಾರಾದರೂ ನಗುವಿಲ್ಲದೆ ಬೇಸರದಿಂದಿದ್ದರೆ ನಿಮ್ಮ ನಗುವನ್ನು ಅವರಿಗೆ ಕೊಡಿ. ಅಂದ್ರೆ ನೀವು ಕೂಡ ನಕ್ಕುಬಿಡಿ ಎನ್ನುವ ಡಾಲಿ ಪಾರ್ಟೊನ್ ವ್ಯಾಖ್ಯಾನವನ್ನು ಬರೆದಿದ್ದಾರೆ.