ಕರ್ನಾಟಕ

karnataka

ETV Bharat / sitara

ಡಯಟ್​​ನಲ್ಲಿರುವ ತಾಪ್ಸಿಗೆ ತಿನ್ನಲು ಪೂರಿ ಕೊಟ್ಟ ನಿರ್ಮಾಪಕ - taapsee pannu praises rashmi rocket producers

ರಶ್ಮಿ ರಾಕೆಟ್​​ ಸಿನಿಮಾಕ್ಕಾಗಿ ಸದ್ಯ ಡಯಟ್​​ನಲ್ಲಿರುವ ನಟಿ ತಾಪ್ಸಿಗೆ ಪೂರಿ ತಂದುಕೊಟ್ಟಿರುವ ನಿರ್ಮಾಪಕರು ನಾಲಿಗೆಗೆ ರುಚಿ ನೀಡಿದ್ದಾರೆ.

ಡಯಟ್​​ನಲ್ಲಿರುವ ತಾಪ್ಸಿಗೆ ತಿನ್ನಲು ಪೂರಿ ಕೊಟ್ಟ ನಿರ್ಮಾಪಕ
ಡಯಟ್​​ನಲ್ಲಿರುವ ತಾಪ್ಸಿಗೆ ತಿನ್ನಲು ಪೂರಿ ಕೊಟ್ಟ ನಿರ್ಮಾಪಕ

By

Published : Dec 30, 2020, 7:14 PM IST

ಬಾಲಿವುಡ್​​ ನಟಿ ತಾಪ್ಸಿ ಪನ್ನು ತಮ್ಮ ಮುಂಬರುವ ಚಿತ್ರ ರಶ್ಮಿ ರಾಕೆಟ್​​ಗಾಗಿ ಸಖತ್​​​ ತಯಾರಿ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ತಾಪ್ಸಿ ಓಟದ ಆಟಗಾರ್ತಿಯಾಗಿ ನಟಿಸುತ್ತಿದ್ದು, ಒಳ್ಳೆ ಡಯಟ್​ ಮಾಡುವ ಮೂಲಕ ದೇಹವನ್ನು ಸದೃಢಗೊಳಿಸಿದ್ದಾರೆ. ಬಹಳ ದಿನಗಳಿಂದ ಡಯಟ್​​ನಲ್ಲಿರುವ ನಟಿಗೆ ಚಿತ್ರದ ನಿರ್ಮಾಪಕರು ಖುಷಿ ನೀಡಿದ್ದಾರೆ.

ಹೌದು.. ಡಯಟ್​​ನಲ್ಲಿರುವ ನಟಿ ತಾಪ್ಸಿಗೆ ಪೂರಿ ತಂದುಕೊಟ್ಟಿರುವ ನಿರ್ಮಾಪಕರು ನಾಲಿಗೆಗೆ ರುಚಿ ನೀಡಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಮ್​​​ನಲ್ಲಿ ಪೂರಿ ಮತ್ತು ಸಾಗು ಇರುವ ವಿಡಿಯೋ ಹಾಕಿಕೊಂಡಿರುವ ನಟಿ, ದೆಹಲಿಯಿಂದ ನನಗಾಗಿ ನಮ್ಮ ನಿರ್ಮಾಪಕರು ಪೂರಿಯನ್ನು ತಂದಿದ್ದಾರೆ. ತಿಂಗಳುಗಳ ನಂತ್ರ ಈ ರೀತಿಯ ತಿನಿಸನ್ನು ಸೇವಿಸುತ್ತಿದ್ದೇನೆ ಎಂದು ಬರೆದಿದ್ದಾರೆ.

ಡಯಟ್​​ನಲ್ಲಿರುವ ತಾಪ್ಸಿಗೆ ತಿನ್ನಲು ಪೂರಿ ಕೊಟ್ಟ ನಿರ್ಮಾಪಕ

ಇತ್ತೀಚೆಗೆ ರಶ್ಮಿ ರಾಕೆಟ್​​​ ಚಿತ್ರದ ಶೂಟಿಂಗ್​ ಅನ್ನು ಜಾರ್ಖಂಡ್​ನಲ್ಲಿ ಮಾಡಿ ಮುಗಿಸಲಾಗಿದೆ. ಈ ಚಿತ್ರಕ್ಕೆ ಆಕರ್ಷ ಖುರಾನಾ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ತಾಪ್ಸಿ ಪತಿಯಾಗಿ ಪ್ರಿಮಾಂಶು ನಟಿಸುತ್ತಿದ್ದಾರೆ.

ABOUT THE AUTHOR

...view details