ಕರ್ನಾಟಕ

karnataka

ETV Bharat / sitara

ಬಾಲ್ಯದ ಫೋಟೋಗಳನ್ನು ಹಂಚಿಕೊಂಡು ಖುಷಿಪಟ್ಟ ರಶ್ಮಿ ಪ್ರಭಾಕರ್ - Rashmi prabhakar childhood photos

ಚಿನ್ನು ಪಾತ್ರದಿಂದ ರಾಜ್ಯಾದ್ಯಂತ ಮನೆಮಾತಾಗಿರುವ ರಶ್ಮಿ ಪ್ರಭಾಕರ್, ಬಾಲ್ಯದಲ್ಲಿ ತೆಗೆದ ತಮ್ಮ ಪಾಸ್ ಪೋರ್ಟ್ ಸೈಜ್ ನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ ಇನ್ಸ್ಟಾಗ್ರಾಂ ಸ್ಟೋರೀಸ್ ನಲ್ಲಿಯೂ ಒಂದಷ್ಟು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಹಳೆಯ ದಿನಗಳ ಸಂತಸವನ್ನು ಮೆಲುಕು ಹಾಕಿದ್ದಾರೆ.

Rashmi prabhakar
Rashmi prabhakar

By

Published : Jul 7, 2020, 4:48 PM IST

Updated : Jul 7, 2020, 5:00 PM IST

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಿನ್ನು ಪಾತ್ರದಿಂದ ಕರ್ನಾಟಕದಾದ್ಯಂತ ಮನೆಮಾತಾಗಿರುವ ರಶ್ಮಿ ಪ್ರಭಾಕರ್, ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ತಮ್ಮ ಹಳೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಸದಾ ಕಾಲ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುವ ರಶ್ಮಿ ಸದ್ಯ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಖುಷಿಗೊಳಿಸಿದ್ದಾರೆ.

ಅಂದ ಹಾಗೆ ರಶ್ಮಿ ಬಾಲ್ಯದಲ್ಲಿ ತೆಗೆದ ತಮ್ಮ ಪಾಸ್​ಪೋರ್ಟ್ ಸೈಜ್ ನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ ಇನ್ಸ್ಟಾಗ್ರಾಂ ಸ್ಟೋರೀಸ್ ನಲ್ಲಿಯೂ ಒಂದಷ್ಟು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಹಳೆಯ ದಿನಗಳ ಸಂತಸವನ್ನು ಮೆಲುಕು ಹಾಕಿದ್ದಾರೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿಯ ದಿನಗಳ ತನಕ ತೆಗೆದಿರುವ ಪಾಸ್ ಪೋರ್ಟ್ ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳ ಮನ ತಣಿಸಿದ್ದಾರೆ.

ಬಾಲ್ಯದ ಫೋಟೋಗಳು

ಜೀವನ ಚೈತ್ರ, ಶುಭ ವಿವಾಹ ಧಾರಾವಾಹಿಗಳಲ್ಲಿ ಅಭಿನಯಿಸಿರುವ ರಶ್ಮಿ ಪ್ರಭಾಕರ್ ಗೆ ಹೆಚ್ಚಿನ ಹೆಸರು ತಂದು ಕೊಟ್ಟಿದ್ದು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲಚ್ಚಿ ಆಲಿಯಾಸ್ ಚಿನ್ನು ಪಾತ್ರ. ಇನ್ನೂ ಸುಜಾತಾ ಸೀರಿಯಲ್ ನಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ ರಶ್ಮಿ ಸದ್ಯ ತೆಲುಗು ಧಾರಾವಾಹಿಯಾದ ಪೌರ್ಣಮಿಯಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತಿದ್ದಾರೆ.

Last Updated : Jul 7, 2020, 5:00 PM IST

ABOUT THE AUTHOR

...view details