ಕರ್ನಾಟಕ

karnataka

ETV Bharat / sitara

ಮೋದಿ-ಶಾ ವಿರುದ್ಧ ಟೀಕೆ, ನಿಂದನೆ: ರ‍್ಯಾಪರ್​ ಹಾರ್ದ್​ ಕೌರ್​ ಟ್ವಿಟ್ಟರ್​ ಅಕೌಂಟ್​​ ಸಸ್ಪೆಂಡ್​ - ರ‍್ಯಾಪರ್​ ಹಾರ್ದ್​ ಕೌರ್​ ಟ್ವಿಟರ್​ ಅಕೌಂಟ್​ ಅಮಾನತು

ರ‍್ಯಾಪರ್​ ಹಾರ್ದ್​ ಕೌರ್​ ಅವರ ನೂತನ We are Warriors ರ‍್ಯಾಪ್ ಸಾಂಗ್ ವಿವಾದ ಹುಟ್ಟುಹಾಕಿದೆ.

rapper hard kaur

By

Published : Aug 14, 2019, 8:24 AM IST

ಖಲಿಸ್ತಾನ್​ ಹೋರಾಟಕ್ಕೆ ಬೆಂಬಲ ಸೂಚಿಸಿರುವ ರ‍್ಯಾಪರ್​ ಹಾರ್ದ್​ ಕೌರ್​ ಟ್ವಿಟ್ಟರ್​​ ಅಕೌಂಟ್ಅನ್ನು​ ಅಮಾನತುಗೊಳಿಸಲಾಗಿದೆ.

ಸಿಂಗರ್​ ಹಾರ್ದ್​ ಕೌರ್ ಖಲಿಸ್ತಾನ್ ಹೋರಾಟಗಾರರ ಜತೆ ಕಾಣಿಸಿಕೊಂಡು, ತಮ್ಮ ಹೊಸ ಸಾಂಗ್ ‘We are Warriors’ ಪ್ರಮೋಷನ್​​ ವಿಡಿಯೋವನ್ನು ಟ್ವಿಟ್ಟರ್​​ಲ್ಲಿ ಪೋಸ್ಟ್ ಮಾಡಿದ್ದರು. ಈ ನೂತನ ರ‍್ಯಾಪ್​ ಸಾಂಗ್​ ಖಲಿಸ್ತಾನ್​​​ ಚಳವಳಿ ಪರ ಇದೆ. ಜತೆಗೆ ಇದರಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಹಾರ್ದ್​ ಕೌರ್​ ಅಕೌಂಟ್​​ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಹಾರ್ದ್​ ಕೌರ್​ ಕಳೆದ ಕೆಲ ತಿಂಗಳುಗಳ ಹಿಂದೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸಿ ದೇಶದ್ರೋಹದ ಪ್ರಕರಣದಲ್ಲಿ ಬುಕ್ ಆಗಿದ್ದರು. ಈಗ ಖಲಿಸ್ತಾನ್ ಹೋರಾಟಕ್ಕೆ ಬೆಂಬಲಿಸಿ ಮತ್ತೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ABOUT THE AUTHOR

...view details