ಕರ್ನಾಟಕ

karnataka

ETV Bharat / sitara

ಹೀರೋ ಆಗುವ ಆಸಕ್ತಿ ಇದೆ, ಆದ್ರೆ ಸಂಗೀತಕ್ಕೆ ನನ್ನ ಮೊದಲ ಆದ್ಯತೆ: ಚಂದನ್ ಶೆಟ್ಟಿ

ನಿನ್ನೆ ಚಾಮರಾಜನಗರ ದಸರಾ ಕಾರ್ಯಕ್ರಮ ಆರಂಭವಾಗುವ ಮುನ್ನ ಈಟಿವಿ ಭಾರತ್ ಜೊತೆ ಮಾತನಾಡಿದ ರ್‍ಯಾಪರ್ ಚಂದನ್ ಶೆಟ್ಟಿ ನನಗೆ ಹೀರೋ ಆಗುವ ಆಸಕ್ತಿ ಇದೆ. ಆದರೆ ಸಂಗೀತಕ್ಕೆ ನನ್ನ ಮೊದಲ ಆದ್ಯತೆ. ಒಳ್ಳೆಯ ಸ್ಕ್ರಿಪ್ಟ್ ದೊರೆತರೆ ಖಂಡಿತ ನಟಿಸುತ್ತೇನೆ ಎಂದು ಹೇಳಿದರು.

ಚಂದನ್ ಶೆಟ್ಟಿ

By

Published : Oct 2, 2019, 6:42 PM IST

ಚಾಮರಾಜನಗರ: ಹೀರೋ ಆಗಿ ನಟಿಸಲು ಈಗಷ್ಟೇ ಆಸಕ್ತಿ ಬಂದಿದೆ ಎಂದು ಕನ್ನಡದ ರ್‍ಯಾಪರ್ ಚಂದನ್​ ಶೆಟ್ಟಿ ಆಸೆ ವ್ಯಕ್ತಪಡಿಸಿದ್ದಾರೆ. ನಿನ್ನೆ ನಗರದಲ್ಲಿ ದಸರಾ ಕಾರ್ಯಕ್ರಮಗಳು ಆರಂಭವಾಗಿವೆ. ಸಂಗೀತ ರಸಸಂಜೆ ಆರಂಭವಾಗುವ ಮುನ್ನ ಈಟಿವಿ ಭಾರತ್ ಜೊತೆ ಅವರು ಮಾತನಾಡಿದರು.

ಚಾಮರಾಜನಗರ ದಸರಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಂದನ್ ಶೆಟ್ಟಿ

ನಾನು ಕರಿಯರನ್ನು ಸಂಗೀತದಿಂದ ಆರಂಭಿಸಿದೆ. ಈ ಕ್ಷೇತ್ರದಲ್ಲೇ ಏನಾದರೂ ಸಾಧಿಸಬೇಕು ಎಂದುಕೊಂಡಿದ್ದೇನೆ. ದೊಡ್ಡ ಮಟ್ಟದ ಗುರಿ ಮುಟ್ಟಲು ಇನ್ನೂ ಸಾಧನೆಯ ಹಾದಿಯಲ್ಲೇ ಇದ್ದೇನೆ. ಆದ್ದರಿಂದ ನಟನೆಗೆ ಹೆಚ್ಚು ಒತ್ತು ನೀಡಿದರೆ ಮೈಂಡ್ ಡೈವರ್ಟ್ ಆಗುತ್ತದೆ ಎಂಬ ಕಾರಣದಿಂದ ಸಂಗೀತದಲ್ಲೇ ಮುಂದುವರೆಯುತ್ತಿದ್ದೇನೆ. ಒಳ್ಳೆಯ ಸ್ಕ್ರಿಪ್ಟ್​​ ಬಂದರೆ ಖಂಡಿತ ಸಿನಿಮಾ ಮಾಡ್ತೀನಿ ಎಂದು ಹೇಳಿದರು.

ಇನ್ನು 'ಬ್ಯಾಡ್​​​​ಬಾಯ್​​' ಎಂಬ ಹೊಸ ಆಲ್ಬಂ ಹಾಡನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇನೆ. 'ಕನ್ನಡ ಕೋಗಿಲೆ' ರಿಯಾಲಿಟಿ ಶೋನಲ್ಲಿ ಗಾಯಕರು ಅದ್ಭುತ ಕಾರ್ಯಕ್ರಮ ನೀಡುತ್ತಿದ್ದು ಯಾರಿಗೆ ಹೆಚ್ಚು ಅಂಕ ಕೊಡಬೇಕೆಂಬುದೇ ಗೊತ್ತಾಗುತ್ತಿಲ್ಲ ಎಲ್ಲರೂ ಚಾಲೆಂಜಿಂಗ್ ಆಗಿ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಚಂದನ್​​​, ದಸರಾ ಮೊದಲ ದಿನವೇ ಪ್ರದರ್ಶನ ನೀಡುತ್ತಿರುವುದು ಖುಷಿ ನೀಡುತ್ತಿದೆ. ಚಾಮರಾಜನಗರ ಜಾನಪದ ಕಲೆಗೆ, ಜಾನಪದ ಗಾಯಕರಿಗೆ ಹೆಸರುವಾಸಿ. ಕಲೆಗಳ ಬೀಡಾದ ಚಾಮರಾಜನಗರದಲ್ಲಿ ನಾನು ಹಾಡುತ್ತಿರುವುದು ಹೆಮ್ಮೆ ಎಂದು ಖುಷಿ ಹಂಚಿಕೊಂಡರು. ಸಿದ್ದಪ್ಪಾಜಿ ಹಾಡುಗಳಲ್ಲಿ ಒಂದನ್ನು ಆರಿಸಿಕೊಂಡು ಸ್ಥಳೀಯ ಜಾನಪದ ಕಲಾವಿದರಾದ ಮಹೇಶ್ ಅವರೊಂದಿಗೆ ಹಾಡುತ್ತಿದ್ದೇನೆ. ಯಾವ ಹಾಡು ಎಂದು ತಿಳಿಯಲು ನೀವೆಲ್ಲಾ ಕಾರ್ಯಕ್ರಮವನ್ನು ಬಂದು ನೋಡಬೇಕು ಎಂದು ಚಂದನ್ ಹೇಳಿದರು.

ABOUT THE AUTHOR

...view details