3 ಪೆಗ್, ಚಾಕೊಲೇಟ್ ಗರ್ಲ್, ಪಾರ್ಟಿ ಫ್ರೀಕ್ ಹೀಗೆ ಹಲವು ಆಲ್ಬಂ ಹಾಡುಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ರ‍್ಯಾಪರ್ ಹಾಗೂ ಸಂಗೀತ ನಿರ್ದೇಶಕ ಅಂದರೆ ಅದು ಚಂದನ್ ಶೆಟ್ಟಿ.
ಬರ್ತಿದ್ದಾಳೆ ಲಕ ಲಕ ಲ್ಯಾಂಬೋರ್ಗಿ ಪ್ರತಿ ವರ್ಷ ಹೊಸ ವರ್ಷಕ್ಕೆ ಪಾರ್ಟಿ ಹಾಡನ್ನ ಬಿಡುಗಡೆ ಮಾಡುವ ಚಂದನ್ ಶೆಟ್ಟಿ, ಈ ವರ್ಷವು ಕೂಡ ಲಕ ಲಕ ಲ್ಯಾಂಬೋರ್ಗಿನಿ ಎಂಬ ಬೊಂಬಾಟ್ ಹಾಡನ್ನು ಖಾಸಗಿ ಹೋಟೆಲ್ವೊಂದರಲ್ಲಿ ಇಂದು ಲಾಂಚ್ ಮಾಡಿದರು.
ಈ ವೇಳೆ, ಪತ್ನಿ ನಿವೇದಿತಾ ಗೌಡ, ನಿರ್ದೇಶಕ ನಂದ ಕಿಶೋರ್, ನಿರ್ಮಾಪಕ ಕೆ. ಮಂಜು, ಕ್ಯಾಮೆರಾಮೆನ್ ಶೇಖರ್ ಚಂದ್ರ ಹಾಗೂ ಆಲ್ಬಂ ಹಾಡನ್ನ ನಿರ್ಮಾಣ ಮಾಡಿರುವ ಆರ್. ಕೇಶವ್ ಉಪಸ್ಥಿತರಿದ್ದರು.
ಹೊಸ ವರ್ಷಕ್ಕಾಗಿ ಚಂದನ್ ಶೆಟ್ಟಿಯಿಂದ ಬೊಂಬಾಟ್ ಹಾಡು ರಿಲೀಸ್ ಕ್ಯಾಚೀ ಟೈಟಲ್ ಹೊಂದಿರುವ ಲಕ ಲಕ ಲ್ಯಾಂಬೋರ್ಗಿನಿ ಆಲ್ಬಂ ಹಾಡಿನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ರಚಿತಾ ರಾಮ್ ಆಲ್ಬಂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ರಚಿತಾ ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ. ಇನ್ನು ಸಂಗೀತ, ಸಾಹಿತ್ಯ, ಗಾಯನ ಜೊತೆಗೆ ರಚ್ಚು ಜೊತೆ ಚಂದನ್ ಶೆಟ್ಟಿ ಸಖತ್ ಸ್ಟೆಪ್ ಹಾಕಿದ್ದಾರೆ.
ಲಕ ಲಕ ಲ್ಯಾಂಬೋರ್ಗಿನಿ ಆಲ್ಬಂ ಹಾಡನ್ನ ಪ್ರಖ್ಯಾತ ನಿರ್ದೇಶಕ ನಂದ ಕಿಶೋರ್ ನಿರ್ದೇಶಿಸಿದ್ದಾರೆ. ಸಿನಿಮಾ ನಿರ್ದೇಶನ ಜೊತೆಗೆ ಮೊದಲ ಬಾರಿಗೆ ಆಲ್ಬಂ ಹಾಡನ್ನ ನಿರ್ದೇಶನ ಮಾಡಿರೊದು ಹೊಸ ಅನುಭವ ಎಂದು ನಂದ ಕಿಶೋರ್ ಹೇಳಿದರು.
ಚಂದನ್ ಶೆಟ್ಟಿ ಹಾಡುಗಳು ಎಂದರೆ ಪಕ್ಕಾ ಡ್ಯಾನ್ಸ್ಗೆ ಹೇಳಿ ಮಾಡಿಸಿದಂತಿರುತ್ತವೆ. ಈ ಹಾಡಿಗೆ ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇನ್ನು ಶೇಖರ್ ಚಂದ್ರ ಹಾಡನ್ನ ಬಹಳ ಚೆನ್ನಾಗಿ ಛಾಯಾಗ್ರಹಣ ಮಾಡಿದ್ದಾರೆ.
ಲಕ ಲಕ ಲ್ಯಾಂಬೋರ್ಗಿನಿ ಹಾಡನ್ನ ಅನಾವರಣ ಮಾಡಿದ ಬಳಿಕ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಜೊತೆ ಸಖತ್ ಡ್ಯಾನ್ಸ್ ಮಾಡಿದರು. ಈ ಜೋಡಿ ಮಧ್ಯೆ ಬೇಬಿ ಬಿದ್ಯಾಗೌಡ ಕೂಡ ಈ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಮಗಳ ಆಸೆಯ ಮೇರೆಗೆ ನಿರ್ಮಾಪಕ ಆರ್. ಕೇಶವ್ ಮತ್ತು ಬಿಂದ್ಯಾ ಕೆ. ಗೌಡ ಅವರು ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ ಅಂತೆ.
ಇದರ ಜೊತೆಗೆ ಮುಂದಿನ ದಿನಗಳಲ್ಲಿ ಬಿಂದ್ಯಾ ಮೂವೀಸ್ ಬ್ಯಾನರ್ ಅಡಿ ಸಿನಿಮಾಗಳನ್ನ ಮಾಡುವ ಆಲೋಚನೆ ಇದೆ. ನಿರ್ಮಾಪಕ ಕೆ. ಮಂಜು ಸ್ನೇಹಿತ ಕೇಶವ್ ಮಗಳಿಗೋಸ್ಕರ ಈ ಆಲ್ಬಂ ಹಾಡನ್ನ ಮಾಡಿದ್ದಾರೆ. ಈ ಹಾಡನ್ನ ದುಬೈನಲ್ಲಿ ಚಿತ್ರೀಕರಣ ಮಾಡುವ ಯೋಚನೆ ಇತ್ತು. ಆದರೆ, ಕೊರೊನಾದಿಂದಾಗಿ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ ಅಂತಾ ಕೆ. ಮಂಜು ತಿಳಿಸಿದರು.
ಇದನ್ನೂ ಓದಿ:ಕಾರು ಬಿಟ್ಟು ಆಟೋ ಓಡಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್..