ಭಾರತ ಸಿನಿ ರಂಗವೇ ಒಂದುಕ್ಷಣ ಚಂದನ ವನದತ್ತ ತಿರುಗುವಂತೆ ಮಾಡಿದ್ದ ಸಿನಿಮಾ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್. ಈ ಚಿತ್ರ ದೊಡ್ಡ ಮಟ್ಟದ ಹಿಟ್ ಆಗಿದೆ. ಇದೀಗ ಕೆಜಿಎಫ್ ಚಾಪ್ಟರ್ ಚಿತ್ರದ ಶೂಟಿಂಗ್ ಜೋರಾಗಿ ನಡೆಯುತ್ತಿದ್ದು, ತಾರಾಗಣ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ.
ಕೆಜಿಎಫ್ ಅಧ್ಯಾಯ 2ಕ್ಕೆ ತೆಲುಗಿನ ರಾವ್ ರಮೇಶ್ ಎಂಟ್ರಿ - ಕೆಜಿಎಫ್ ಚಾಪ್ಟರ್ 2ಗೆ ತೆಲುಗಿನ ರಾವ್ ರಮೇಶ್
ಕೆಜಿಎಫ್ ಅಂಗಳಕ್ಕೆ ತೆಲುಗಿನ ಹೆಸರಾಂತ ನಟ ರಾವ್ ರಮೇಶ್ ಎಂಟ್ರಿಕೊಟ್ಟಿದ್ದಾರೆ. ಇವರನ್ನು ಚಿತ್ರತಂಡಕ್ಕೆ ಸ್ವಾಗತಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, 'ನಿಮ್ಮನ್ನು ದೊಡ್ಡ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪ್ರೇಕ್ಷಕರಿಗೆ ನಿಮ್ಮ ಪಾತ್ರ ಯಾವುದೆಂದು ಗೆಸ್ ಮಾಡಲು ಬಿಟ್ಟಿದ್ದೇವೆ' ಎಂದು ಪ್ರಶಾಂತ್ ನೀಲ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಕೆಜಿಎಫ್ ಚಾಪ್ಟರ್ 2ಗೆ ತೆಲುಗಿನ ರಾವ್ ರಮೇಶ್ ಎಂಟ್ರಿ
ಇದೀಗ ಕೆಜಿಎಫ್ ಅಂಗಳಕ್ಕೆ ತೆಲುಗಿನ ಹೆಸರಾಂತ ನಟ ರಾವ್ ರಮೇಶ್ ಎಂಟ್ರಿಕೊಟ್ಟಿದ್ದಾರೆ. ಇವರನ್ನು ಚಿತ್ರತಂಡಕ್ಕೆ ಸ್ವಾಗತಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, 'ನಿಮ್ಮನ್ನು ದೊಡ್ಡ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪ್ರೇಕ್ಷಕರಿಗೆ ನಿಮ್ಮ ಪಾತ್ರ ಯಾವುದೆಂದು ಗೆಸ್ ಮಾಡಲು ಬಿಟ್ಟಿದ್ದೇವೆ' ಎಂದು ಪ್ರಶಾಂತ್ ನೀಲ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀವೆಗೆ ಕೆಜಿಎಫ್ ಚಾಪ್ಟರ್ 2 ನಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.