ಹೈದರಾಬಾದ್: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯಕ್ಕೆ ಮನ ಸೋಲದವರಿಲ್ಲ. ದಿನದಿಂದ ದಿನಕ್ಕೆ ಅವರ ನಟನೆಗೆ, ವ್ಯಕ್ತಿತ್ವಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ಇದೀಗ ಅವರೇ ಪುಟ್ಟ ಮಗುವೊಂದರ ಅಭಿಮಾನಿಯಾಗಿದ್ದಾರೆ.
ಹೌದು, ರಣವೀರ್ ಸಿಂಗ್ ಅಭಿನಯದ ಗಲ್ಲಿ ಬಾಯ್ ಚಿತ್ರದ ಪ್ರಸಿದ್ಧ ರ‍್ಯಾಂಪ್ ಸಾಂಗ್ ಅಪ್ನಾ ಟೈಂ ಆಯೇಗಾ ವನ್ನು ಬಾಲಕನೊಬ್ಬ ವಿಭಿನ್ನ ಶೈಲಿಯಲ್ಲಿ ಹಾಡಿದ್ದು, ಎಲ್ಲರ ಮನಗೆದ್ದಿದ್ದಾನೆ. ಈ ವಿಡಿಯೋವನ್ನು ರಣವೀರ್ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗುವಿನ ಶೈಲಿ ಮತ್ತು ಉತ್ಸಾಹವನ್ನು ಶ್ಲಾಘಿಸಿದ್ದಾರೆ.
ರಣವೀರ್ ಸಿಂಗ್ ತನ್ನ ಇನ್ಸ್ಟಾದಲ್ಲಿ ಅರುಣಾಚಲ ಪ್ರದೇಶದ ಮಗುವಿನ ವಿಡಿಯೋ ಶೇರ್ ಮಾಡಿದ್ದಾರೆ. ಈ ಮಗು ರಣವೀರ್ ಸಿಂಗ್ ಅವರ ಅಪ್ನಾ ಟೈಂ ಆಯೇಗಾ ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿದ್ದಾನೆ. ಇದು ರ‍್ಯಾಂಪ್ ಶೈಲಿಯಂತಿದೆ.
ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ರಣವೀರ್ ಸಿಂಗ್ ಈ ಪುಟ್ಟ ಮೊನ್ಪಾ ಮಗು, ನನ್ನ ಸ್ಫೂರ್ತಿ.. ನನ್ನ ಸಮಯ ಬರುತ್ತದೆ ಎಂದು ಶೀರ್ಷಿಕೆ ಬರೆದಿದ್ದಾರೆ.