ದೀಪಿಕಾ ಪಡುಕೋಣೆ (Deepika Padukone ) ಮತ್ತು ರಣವೀರ್‌ಸಿಂಗ್ (Ranveer Singh) ಅತ್ಯಂತ ಪ್ರೀತಿಯ ಸೆಲೆಬ್ರಿಟಿ ಜೋಡಿ. ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಈ ದಂಪತಿ, ಆಗಾಗ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುತ್ತಾರೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವವನ್ನು ಉತ್ತರಾಖಂಡ್ನಲ್ಲಿ ಆಚರಿಸಿದ್ದರು. ಈ ಸಂದರ್ಭದಲ್ಲಿ ಪರ್ವತದ ಮೇಲೆ ಜೊತೆಯಾಗಿ ಕುಳಿತು ಕಳೆದ ಸುಂದರ ಕ್ಷಣಗಳನ್ನು ಶೇರ್ ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ತಾರಾ ಜೋಡಿ ರಣವೀರ್ ಬುಧವಾರ ತಮ್ಮ ಇನ್ಸ್ಟಾಗ್ರಾಮ್ (Instagram) ನಲ್ಲಿ ಹಲವಾರು ಕ್ಯಾಂಡಿಡ್ ಬ್ಲಾಕ್ & ವೈಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೃದಯ ಎಮೋಜಿಯೊಂದಿಗೆ ಸರಳವಾಗಿ ಶೀರ್ಷಿಕೆ ನೀಡಿ ಫೋಟೋಗಳನ್ನು ಶೇರ್ ಮಾಡಿದ್ದು, ಅಭಿಮಾನಿಗಳು ಈ ತಾರಾ ಜೋಡಿಯ ಫೋಟೋಗಳಿಗೆ ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇನ್ನು ರಣವೀರ್ ಶೇರ್ ಮಾಡಿದ ಮೊದಲ ಚಿತ್ರದಲ್ಲಿ ಅವರು ದೀಪಿಕಾಳನ್ನು ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು. ಎರಡನೇ ಫೋಟೋದಲ್ಲಿ ನಟಿಯ ಹಣೆಗೆ ಮುತ್ತಿಟ್ಟಿರುವುದನ್ನು ನೋಡಬಹುದು.