ಬಾಲಿವುಡ್ ನಟ ರಣವೀರ್ ಸಿನಿ ಜರ್ನಿಯಲ್ಲಿ ಹೆಸರು ಗಳಿಸಿರುವ ಸಿನಿಮಾಗಳ ಪೈಕಿ ಜೋಯಾ ಅಕ್ತರ್ ನಿರ್ದೇಶನದ 'ಗಲ್ಲಿ ಬಾಯ್' ಕೂಡ ಒಂದು. ಈ ಸಿನಿಮಾದಲ್ಲಿ ರಣವೀರ್ ರ‍್ಯಾಪ್ ಹಾಡುಗಾರ ಮುರಾದ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಮುರಾದ್ ಪಾತ್ರ ನನಗೆ ಸರಿ ಹೊಂದುವ ಪಾತ್ರ ಎಂದು ರಣವೀರ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮನದಾಳ ಬಿಚ್ಚಿಟ್ಟಿರುವ ರಣವೀರ್, ನನ್ನ ಕರ್ಮ ಭೂಮಿಗೆ ಗೌರವ ಸಲ್ಲಿಸಲು ಗಲ್ಲಿ ಬಾಯ್ ಒಂದೊಳ್ಳೆ ಅವಕಾಶ ಮಾಡಿಕೊಟ್ಟಿತು ಎಂದಿದ್ದಾರೆ.