ರಾತ್ರೋರಾತ್ರಿ ಸೋಷಿಯಲ್ ಮಿಡಿಯಾದಲ್ಲಿ ಹವಾ ಎಬ್ಬಿಸಿದ್ದ ರಾನು ಮಡಲ್ರನ್ನು ಇತ್ತೀಚೆಗೆ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ರು. ಇದಕ್ಕೆ ಕಾರಣ ಶಾಪಿಂಗ್ ಮಾಲ್ವೊಂದರಲ್ಲಿ ರಾನು ಮಂಡಲ್ ತಮ್ಮ ಅಭಿಮಾನಿಯ ಜೊತೆ ನಡೆದುಕೊಂಡ ರೀತಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಇದೀಗ ರಾನು ಬಗ್ಗೆ ಟ್ರೋಲ್ ಮಾಡಿರುವ ನೆಟ್ಟಿಗರಿಗೆ ರಾನು ಮಂಡಲ್ ಪುತ್ರಿ ಎಲಿಜಬೆತ್ ಸಥಿ ರಾಯ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ರಾನು ಮಂಡಲ್ರ ಫೋಟೋ ಎಡಿಟ್ ಮಾಡಿ, ಅತಿಯಾದ ಮೇಕಪ್ ಮಾಡಿಕೊಂಡಂತೆ ಮಾಡಲಾಗಿತ್ತು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು.
ಇದರ ಬಗ್ಗೆ ಮಾತನಾಡಿರುವ ರಾನು ಪುತ್ರಿ, ಈ ರೀತಿಯಾಗಿ ನನ್ನ ತಾಯಿಯನ್ನು ಟ್ರೋಲ್ ಮಾಡುತ್ತಿರುವುದು ಬೇಸರ ತರಿಸಿದೆ. ನನ್ನ ತಾಯಿಗೆ ಕೊಂಚ ಅಹಂಕಾರ ಇರುವುದನ್ನು ಒಪ್ಪಿಕೊಳ್ಳುತ್ತೇನೆ. ಇದು ಕೆಲವು ವೇಳೆ ಅವಳ ಜೀವನಕ್ಕೆ ಕಂಟಕವಾಗುತ್ತದೆ ಎಂಬುದನ್ನೂ ಬಲ್ಲೆ. ಆದ್ರೆ ಅಭಿವೃದ್ಧಿ ಪಥದಲ್ಲಿ ಸಾಗುವ ವೇಳೆ ಈ ರೀತಿಯ ಟ್ರೋಲ್ಗಳು ಬಂದರೆ ಅವಳ ಏಳಿಗೆಗೆ ಕಷ್ಟವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ರಾನು ಬಗ್ಗೆ ಹಾಸ್ಯ ಮಾಡುವವರಿಗೂ ಎಲಿಜಬೆಟ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ನನ್ನ ತಾಯಿ ಬಗ್ಗೆ ಚೀಪ್ ಆಗಿ ಮಿಮಿಕ್ ಮಾಡುತ್ತಿದ್ದೀರಿ. ಅವಳು ಮಾಡೆಲ್ ಅಲ್ಲ. ಕೇವಲ ಸಿಂಗರ್ ಅಷ್ಟೆ. ಅವಳೇನು ಹೈಫೈ ಫ್ಯಾಪಿಲಿಯಿಂದ ಬಂದವಳಲ್ಲ. ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದಿಂದ ಬಂದಿದ್ದಾಳೆ. ಫ್ಯಾಶನ್ ಮಾಡಲು ಬಾಲಿವುಡ್ನಲ್ಲಿ ಅವಕಾಶ ಪಡೆದುಕೊಂಡಿಲ್ಲ. ಬೀದಿ ಬದಿಯಲ್ಲಿ ಹಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಈ ಅವಕಾಶ ಸಿಕ್ಕಿದೆ ಎಂದು ರಾನು ಪುತ್ರಿ ನೋವನ್ನು ತೋಡಿಕೊಂಡಿದ್ದಾಳೆ.