ಬಹಳಷ್ಟು ನಟ-ನಟಿಯರು ಚಿತ್ರರಂಗದಲ್ಲಿ ಅಂದುಕೊಂಡಂತೆ ಯಶಸ್ಸು ಕಾಣದಿದ್ದಾಗ ಜ್ಯೋತಿಷ್ಯ, ಸಂಖ್ಯಾಶಾಸ್ತ್ರದ ಮೊರೆ ಹೋಗುವುದು ಸಹಜ. ಇದೀಗ ಮತ್ತೊಬ್ಬರು ನಟಿ ತಮ್ಮ ಹೆಸರನ್ನು ಬದಲಿಸಿಕೊಂಡು ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಹೆಸರು ಬದಲಿಸಿಕೊಂಡ 'ರಂಗಿತರಂಗ' ಸುಂದರಿ - ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
'ರಂಗಿತರಂಗ' ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾದ ರಾಧಿಕಾ ಚೇತನ್ ಇದೀಗ ರಾಧಿಕಾ ನಾರಾಯಣ್ ಎಂದು ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಜ್ಯೋತಿಷ್ಯದ ಮೂಲಕ ನಾನು ಹೆಸರು ಬದಲಿಸಿಕೊಂಡಿರುವುದಾಗಿ 'ಮುಂದಿನ ನಿಲ್ದಾಣ' ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರೇ ಹೇಳಿಕೊಂಡಿದ್ದಾರೆ.
ರಾಧಿಕಾ ಚೇತನ್, 2015 ರಲ್ಲಿ ಬಿಡುಗಡೆಯಾದ 'ರಂಗಿತರಂಗ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚೆಲುವೆ. ಇದೀಗ ಸಿನಿಮಾ ಇಂಡಸ್ಟ್ರಿಯಲ್ಲಿ ಈ ನಟಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. 'ರಂಗಿತರಂಗ' 'ಯೂಟರ್ನ್' ಸಿನಿಮಾ ನಂತರ ಅವರು ನಟಿಸಿರುವ 'ಕಾಫಿ ತೋಟ', 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ', 'ಚೇಸ್' ಚಿತ್ರಗಳು ಅಂದುಕೊಂಡ ಮಟ್ಟಿಗೆ ಯಶಸ್ಸು ಕಂಡಿಲ್ಲವಂತೆ. ಹೀಗಾಗಿ ರಾಧಿಕಾ ಚೇತನ್ ಅದೃಷ್ಟ ಪರೀಕ್ಷಿಸಿಕೊಳ್ಳಲು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರಂತೆ. ಇದೀಗ ಅವರು ರಾಧಿಕಾ ನಾರಾಯಣ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ನಾನು 'ಮುಂದಿನ ನಿಲ್ದಾಣ' ಸಿನಿಮಾ ಮೂಲಕ ರಾಧಿಕಾ ನಾರಾಯಣ್ ಆಗಿ ಬದಲಾಗಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಜ್ಯೋತಿಷ್ಯದ ಪ್ರಕಾರ ನಾನು ಹೆಸರು ಬದಲಿಸಿಕೊಂಡಿದ್ದೇನೆ ಎಂದು ರಾಧಿಕಾ ನಾರಾಯಣ್ ಹೇಳಿದ್ದಾರೆ.