ಕರ್ನಾಟಕ

karnataka

ETV Bharat / sitara

'ಮತ್ತೆ ಉದ್ಭವ' ಚಿತ್ರದ ಫೋಟೋಗಳು ರಿವೀಲ್​​​: ರಂಗಾಯಣ ರಘು, ಪ್ರಮೋದ್​​ ಜುಗಲ್​​​ಬಂಧಿ - undefined

ರಂಗಾಯಣ ರಘು ಹಾಗೂ ಪ್ರಮೋದ್ ನಟನೆಯ 'ಮತ್ತೆ ಉದ್ಭವ' ಸಿನಿಮಾ ಕೆಲವು ದಿನಗಳ ಹಿಂದೆ ಸೆಟ್ಟೇರಿತ್ತು. ಇದೀಗ ಚಿತ್ರದ ಕೆಲವೊಂದು ಫೋಟೋಗಳು ರಿವೀಲ್ ಆಗಿವೆ.

'ಮತ್ತೆ ಉದ್ಭವ'

By

Published : Jun 12, 2019, 6:57 PM IST

ಗೀತಾ ಬ್ಯಾಂಗಲ್​ ಸ್ಟೋರ್​​ನಲ್ಲಿ ನಾಯಕ, ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್​​ ಕಾರ್​ ಡ್ರೈವರ್ ನಂಜುಂಡಿ ಆಗಿ ನಟಿಸಿದ್ದ ಪ್ರಮೋದ್ ಇದೀಗ 'ಮತ್ತೆ ಉದ್ಭವ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಮಿಲನ ಪ್ರಕಾಶ್​, ಪ್ರಮೋದ್​​
ಮಿಲನ ಪ್ರಕಾಶ್
'ಮತ್ತೆ ಉದ್ಭವ' ಚಿತ್ರದ ಸ್ಟಿಲ್​​

ಏನಿದು ಉದ್ಭವ ಅಂತೀರಾ..? 1990ರಲ್ಲಿ ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ 'ಉದ್ಭವ' ಎಂಬ ಸಿನಿಮಾ ಬಂದಿತ್ತು. 29 ವರ್ಷಗಳ ನಂತರ ಆ ಚಿತ್ರಕ್ಕೆ ಸೀಕ್ವೆಲ್ ಭಾಗ್ಯ ಸಿಕ್ಕಿದೆ. ಕೆಲವು ದಿನಗಳ ಹಿಂದೆ ಈ ಸಿನಿಮಾ ಸೆಟ್ಟೇರಿದೆ. ಸದ್ಯ 'ಲವ್ ಮೊಕ್ಟೇಲ್', 'ಓಹ್' ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಮಿಲನ 'ಮತ್ತೆ ಉದ್ಭವ'ದಲ್ಲಿ ಪ್ರಮೋದ್​ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಫೋಟೋಶೂಟ್​​ನ ಕೆಲವೊಂದು ಪೋಟೋಗಳನ್ನು ಚಿತ್ರತಂಡ ರಿವೀಲ್ ಮಾಡಿದೆ. ಈ ಫೋಟೋಶೂಟ್​​ನಲ್ಲಿ ಪ್ರಮೋದ್ ಹಿರಿಯ ಹಾಸ್ಯ ನಟ ರಂಗಾಯಣ ರಘು ಜೊತೆ ಮುಗ್ಧ ಹುಡುಗನಾಗಿ ಕಂಡರೆ, ಮಿಲನ ಪ್ರಕಾಶ್ ಜೊತೆ ಲವರ್ ಬಾಯ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಮೋಹನ್ ಕೂಡಾ ಈ ಸಿನಿಮಾದಲ್ಲಿ ಜ್ಯೋತಿಷಿ ಪಾತ್ರದಲ್ಲಿ ನಟಿಸಿದ್ದಾರೆ.

ಮೋಹನ್
ಪ್ರಮೋದ್​​, ಮಿಲನ ಪ್ರಕಾಶ್​

For All Latest Updates

TAGGED:

ABOUT THE AUTHOR

...view details