ಕರ್ನಾಟಕ

karnataka

ETV Bharat / sitara

ರಂಗನಾಯಕಿ ಸಿನಿಮಾ ನೋಡಿದ ಆ ವ್ಯಕ್ತಿ ನಿರ್ದೇಶಕರಿಗೆ ಕಳುಹಿಸಿದ ಸಂದೇಶದಲ್ಲಿ ಏನಿತ್ತು? - ranganayaki movie

ರಂಗನಾಯಕಿ ಚಿತ್ರ ವೀಕ್ಷಿಸಿದ ವ್ಯಕ್ತಿಯೊಬ್ಬರು ದಯಾಳ್ ಪದ್ಮನಾಭನ್ ಅವರಿಗೆ ಇದು ಥೇಟ್ ತಮ್ಮ ಜೀವನದಲ್ಲಿ ಆದ ಘಟನೆ. ಆದರೆ ನನ್ನ ಕೈಯಲ್ಲಿ ಹೊರಾಡಲು ಸಾಧ್ಯವಾಗಲಿಲ್ಲ. ನನಗೆ ಆ ರೀತಿ ಮಾಡಿದವರಿಗೆ ಈ ಸಿನಿಮಾ ತೋರಿಸಬೇಕು ಎಂದಿದ್ದಾರೆ.

ದಯಾಳ್​ ಪದ್ಮನಾಭನ್​​

By

Published : Nov 9, 2019, 10:53 AM IST

ಮಸಾಲೆ ಚಿತ್ರಗಳಿಂದ ಅರ್ಥಗರ್ಭಿತ ಚಿತ್ರಗಳ ಕಡೆ ಹೊರಳಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ‘ರಂಗನಾಯಕಿ’ ಸಿನಿಮಾ ಮಾಡಿದ್ದಾರೆ. ತೆರೆ ಕಂಡ ಮೊದಲ ವಾರದಲ್ಲಿಯೇ ರಂಗನಾಯಕಿ 50 ಲಕ್ಷ ರೂಪಾಯಿಗಳನ್ನು ಕೇವಲ ಮಲ್ಟಿಪ್ಲೆಕ್ಸ್​ನಿಂದಲೇ ಗಳಿಸಿದೆ. ಇದರ ಜೊತೆಗೆ ಇಂಡಿಯನ್ ಪನೋರಮ ಆಯ್ಕೆಯಿಂದ 18.50 ಲಕ್ಷ ಮತ್ತು ಕೇಂದ್ರ ಸರ್ಕಾರದಿಂದ 25 ಲಕ್ಷ ಸಿಕ್ಕಿದೆ. ಇನ್ನು ಒಂದು ವಾರದ ಸಿಂಗಲ್ ಸ್ಕ್ರೀನ್​​ ಗಳಿಕೆ ಬಗ್ಗೆ ಮಾಹಿತಿ ಬಂದಿಲ್ಲ ಎನ್ನಲಾಗಿದೆ.

ರಂಗನಾಯಕಿ ಪೋಸ್ಟರ್​​

ಸಿಂಗಲ್ ಸ್ಕ್ರೀನ್ ಪರದೆಗಳಿಂದ ಸ್ವಲ್ಪ ಲೇಟಾಗಿ ಅಂಕಿ ಅಂಶಗಳು ಬರಲಿವೆ. ಅಲ್ಲಿ ಶೇಕಡಾವಾರು ಪದ್ಧತಿಯಲ್ಲಿ ಪ್ರದರ್ಶನ ಮಾಡಲಾಗಿದೆ. ಈ ಚಿತ್ರದ ಎಲ್ಲಾ ವಿಭಾಗದಿಂದ ನಾನು ಸಂಪೂರ್ಣ ಖುಷಿಯಾಗಿದ್ದೇನೆ ಎನ್ನುತ್ತಾರೆ ನಿರ್ದೇಶಕ ದಯಾಳ್.

ಅಂದಹಾಗೆ ‘ರಂಗನಾಯಕಿ’ ಚಿತ್ರ ವೀಕ್ಷಿಸಿದ ವ್ಯಕ್ತಿಯೊಬ್ಬರು ದಯಾಳ್ ಪದ್ಮನಾಭನ್ ಅವರಿಗೆ ಇದು ಥೇಟ್ ತಮ್ಮ ಜೀವನದಲ್ಲಿ ಆದ ಘಟನೆ. ಆದರೆ ನನ್ನ ಕೈಯಲ್ಲಿ ಹೊರಾಡಲು ಸಾಧ್ಯವಾಗಲಿಲ್ಲ. ಈಗ ನಾನು ಮದುವೆಯಾಗಿದ್ದೇನೆ. ನನಗೆ ಆ ರೀತಿ ಮಾಡಿದವರು ನನ್ನ ಸುತ್ತಮುತ್ತ ಇದ್ದಾರೆ. ಅವರನ್ನು ಕರೆದುಕೊಂಡು ಹೋಗಿ ಈ ಸಿನಿಮಾ ತೋರಿಸುವ ಯೋಚನೆಯಲ್ಲಿದ್ದೇನೆ ಎಂದಿದ್ದಾರೆ.

ದಯಾಳ್​​​ಗೆ ಕಳುಹಿಸಿದ ಸಂದೇಶ

ABOUT THE AUTHOR

...view details