ದಯಾಳ್ ಪದ್ಮನಾಭನ್ ನಿರ್ದೇಶನದ, ಅದಿತಿ ಪ್ರಭುದೇವ ಅಭಿನಯದ ರಂಗನಾಯಕಿ ಚಿತ್ರದ ಪ್ರೀಮಿಯರ್ ಶೋಗೆ ಸ್ಯಾಂಡಲ್ವುಡ್ನ ಪ್ರಮುಖರು ಆಗಮಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ, ನಟಿ ವಿಜಯ ಲಕ್ಷ್ಮಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳ ಮಾತನಾಡಿದ ನಿಖಿಲ್, ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಎಫೆಕ್ಟ್ನಿಂದ ಜನರು ಬಹಳ ಪ್ರಬುದ್ಧರಾಗಿದ್ದಾರೆ. ರಂಗನಾಯಕಿ ಸೆನ್ಸಿಬಲ್ ಹಾಗೂ ಸೆನ್ಸಿಟಿವ್ ಸಿನಿಮಾ. ವಿಶೇಷವಾಗಿ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಏನೇ ಕಷ್ಟ, ಅನ್ಯಾಯ ಆದ್ರು ಹೇಗೆ ಎದುರಿಸುತ್ತಾರೆ ಎಂಬ ಕಥೆಯನ್ನು ಆಧರಿಸಿ ಸಿನಿಮಾ ನಿರ್ಮಾಣವಾಗಿದೆ ಎಂದರು.