ಕರ್ನಾಟಕ

karnataka

ETV Bharat / sitara

ಮಾಯಾವತಿ ವಿರುದ್ದ ಅಸಹ್ಯ Joke​: ಸಿಎಮ್ಎಸ್ ರಾಯಭಾರಿ ಸ್ಥಾನದಿಂದ ನಟ ರಣದೀಪ್ ಹೂಡಾ ವಜಾ! - ಮಾಜಿ ಸಿಎಂ ಮಾಯಾವತಿ ವಿರುದ್ಧ ಅಸಹ್ಯ ಜೋಕ್​

ಮಾಜಿ ಸಿಎಂ ಮಾಯಾವತಿ ಕುರಿತು ಅಸಹ್ಯ ಜೋಕ್ ಮಾಡಿ ಟ್ರೋಲ್ ಆದ ನಟ ರಣದೀಪ್ ಹೂಡಾ ಅವರನ್ನು ವಿಶ್ವಸಂಸ್ಥೆಯ ಪರಿಸರ ಒಪ್ಪಂದದ ವಲಸೆ ಪ್ರಭೇದಗಳ ಸಂರಕ್ಷಣೆ (ಸಿಎಮ್ಎಸ್) ರಾಯಭಾರಿ ಸ್ಥಾನದಿಂದ ತೆಗೆದುಹಾಕಲಾಗಿದೆ.

randeep-hooda
ನಟ ರಣದೀಪ್ ಹೂಡಾ

By

Published : May 28, 2021, 5:37 PM IST

Updated : May 28, 2021, 5:52 PM IST

ಮುಂಬೈ:ಮಾಜಿ ಸಿಎಂ ಮಾಯಾವತಿ ವಿರುದ್ಧ ಅಸಹ್ಯವಾಗಿ ಜೋಕ್ ಮಾಡಿದ ಹಿನ್ನೆಲೆ ನಟ ರಣದೀಪ್​ ಹೂಡಾ ಅವರನ್ನು ವಿಶ್ವಸಂಸ್ಥೆಯ ಪರಿಸರ ಒಪ್ಪಂದದ ವಲಸೆ ಪ್ರಭೇದಗಳ ಸಂರಕ್ಷಣೆ (ಸಿಎಮ್ಎಸ್) ರಾಯಭಾರಿ ಸ್ಥಾನದಿಂದ ತೆಗೆದು ಹಾಕಲಾಗಿದೆ.

ಖ್ಯಾತ ನಟ ರಣದೀಪ್ ಹೂಡಾ ಅವರು ಒಂದು ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಕುರಿತು ಅಸಹ್ಯವಾಗಿ ಜೋಕ್ ಮಾಡಿದ್ದರು. ಇದೀಗ ಆ ವಿಡಿಯೋ ವೈರಲ್ ಆಗುತ್ತಿದ್ದು, ರಣದೀಪ್ ಹೂಡಾ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.

2012 ರಲ್ಲಿ ಮೀಡಿಯಾ ಹೌಸ್ ಆಯೋಜಿಸಿದ್ದ ಈವೆಂಟ್‌ನ 43 ಸೆಕೆಂಡುಗಳ ಕ್ಲಿಪ್​ವೊಂದರಲ್ಲಿ ನಟ ಹೂಡಾ ಅವರು, ಮಾಯಾವತಿ ವಿರುದ್ಧ ಕೀಳಾಗಿ ಜೋಕ್ ಮಾಡಿದ್ದನ್ನು ಟ್ವಿಟರ್​ ಬಳಕೆದಾರರು ಹಂಚಿಕೊಂಡಿದ್ದರಿಂದ ಅದು ಹೆಚ್ಚು ವೈರಲ್​ ಆಗುತ್ತಿದೆ. ಹಾಗೆಯೇ ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ.

ನಟ ರಣದೀಪ್ ಇತ್ತೀಚೆಗೆ ನಟ ಸಲ್ಮಾನ್ ಖಾನ್ ಅಭಿನಯದ 'ರಾ‍ಧೆ' ಸಿನಿಮಾದಲ್ಲಿಯೂ ಅಭಿನಯಿಸಿದ್ದರು. ಸುಲ್ತಾನ್, ಭಾಗಿ 2, ಕಿಕ್, ಹಾಗೂ ಕೆಲ ವೆಬ್‌ಸಿರೀಸ್‌ನಲ್ಲಿಯೂ ನಟಿಸಿದ್ದಾರೆ.

ಓದಿ:ಸಲ್ಮಾನ್​ ಖಾನ್​ ವಿರುದ್ಧ ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಬಾರದು : ಕೆಆರ್‌ಕೆಗೆ ಆದೇಶ

Last Updated : May 28, 2021, 5:52 PM IST

ABOUT THE AUTHOR

...view details