ಕರ್ನಾಟಕ

karnataka

ETV Bharat / sitara

'ಅನ್​ಫೈರ್​​ ಅಂಡ್​​ ಲವ್ಲಿ' ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಇಲಿಯಾನ, ರಣದೀಪ್​​ ಹೂಡ - ಅನ್​ಫೈರ್​​ ಅಂಡ್​​ ಲವ್ಲಿ ಸಿನಿಮಾ

ರಣದೀಪ್​​ ಹೂಡ ಮತ್ತು ಇಲಿಯಾನ ಡಿಕ್ರೂಸ್​​ ನಟನೆಯ ಹಾಸ್ಯಭರಿತ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಅನ್​ಫೈರ್​​ ಅಂಡ್​​ ಲವ್ಲಿ ಎಂದು ನಾಮಕರಣ ಮಾಡಲಾಗಿದ್ದು, ಚಿತ್ರಕ್ಕೆ ಸೋನಿ ಪಿಕ್ಷರ್​​​ ಫಿಲ್ಮ್ಸ್​​​​​​ ಇಂಡಿಯಾ ಸಂಸ್ಥೆ ಬಂಡವಾಳ ಹಾಕಲಾಗುತ್ತಿದೆ.

Randeep Hooda, Ileana D'Cruz to star in Unfair & Lovely
ಅನ್​ಫೈರ್​​ ಅಂಡ್​​ ಲವ್ಲಿ ಸಿನಿಮಾದಲ್ಲಿ ಬಣ್ಣ ಹಚ್ಚಿತ್ತಿದ್ದಾರೆ ಇಲಿಯಾನ ಮತ್ತು ರಣದೀಪ್​​ ಹೂಡ

By

Published : Oct 15, 2020, 4:33 PM IST

ಬಾಲಿವುಡ್​​ನ ರಣದೀಪ್​​ ಹೂಡ ಮತ್ತು ಇಲಿಯಾನ ಡಿಕ್ರೂಸ್​​ ನಟನೆಯ ಹಾಸ್ಯಭರಿತ ಸಿನಿಮಾವೊಂದು ಸಿದ್ಧಗೊಳ್ಳುತ್ತಿದೆ. ಈ ಚಿತ್ರಕ್ಕೆ ಅನ್​ಫೈರ್​​ ಅಂಡ್​​ ಲವ್ಲಿ ಎಂದು ಶೀರ್ಷಿಕೆ ನೀಡಲಾಗಿದ್ದು, ಚಿತ್ರಕ್ಕೆ ಸೋನಿ ಪಿಕ್ಷರ್​​​ ಫಿಲ್ಮ್ಸ್​​​​​​ ಇಂಡಿಯಾ ಸಂಸ್ಥೆ ದುಡ್ಡು ಹಾಕುತ್ತಿದೆ.

ಸಿನಿಮಾವನ್ನು ಬಲ್ವಿಂದರ್​​ ಸಿಂಗ್​​ ಜಂಜುವಾ ನಿರ್ದೇಶಿಸುತ್ತಿದ್ದು, ಅನ್​ಫೈರ್​​ ಅಂಡ್​​ ಲವ್ಲಿ ಚಿತ್ರವು ಕಪ್ಪು ಮತ್ತು ಬಿಳುಪು ಚರ್ಮದ ಜನರ ನಡುವೆ ನಡೆಯುವ ಸಂಗತಿಗಳನ್ನು ಹಾಸ್ಯಾತ್ಮಕವಾಗಿ ಕಟ್ಟಿಕೊಡುತ್ತಿದೆ.

ಸಿನಿಮಾ ಬಗ್ಗೆ ಮಾತನಾಡಿರುವ ಸೋನಿ ಪಿಕ್ಷರ್​​​ ಫಿಲ್ಮ್ಸ್​​​​​​ ಇಂಡಿಯಾದ ಮ್ಯಾನೇಜಿಂಗ್​ ಡೈರೆಕ್ಟರ್​​ ವಿವೇಕ್​​ ಕೃಷ್ಣಾನಿ, 'ನಮ್ಮ ಸಂಸ್ಥೆ ವಿಶೇಷ ಕಥೆಗಳು, ಹಾಸ್ಯಭರಿತ ಅಂಶಗಳು ಹಾಗು ಸಮಾಜಕ್ಕೆ ಬೇಕಾಗುವ ಕಥೆಗಳನ್ನು ನೀಡುತ್ತದೆ. ನಾವು ಸದಾಕಾಲ ಹೊಸ ಹೊಸ ಕಲೆ ಮತ್ತು ಕಲಾವಿದರು, ಪ್ರತಿಭೆಗಳನ್ನು ಪರಿಚಯಿಸುತ್ತೇವೆ' ಎಂದಿದ್ದಾರೆ.

ಚಿತ್ರದಲ್ಲಿ ಇಲಿಯಾನ ಲವ್ಲಿ ಎಂಬ ಪಾತ್ರ ಮಾಡುತ್ತಿದ್ದಾರೆ. ಈ ಬಗ್ಗೆ ಹೇಳಿರುವ ಅವರು, 'ಈ ಪಾತ್ರ ನನಗೆ ವಿಶೇಷ ಅನುಭವ ನೀಡಿದೆ' ಎಂದಿದ್ದಾರೆ. ಈ ಚಿತ್ರ 2021ಕ್ಕೆ ತೆರೆ ಕಾಣಲಿದ್ದು, ಭಾರತದ ನಾನಾ ಕಡೆ ರಿಲೀಸ್​ ಮಾಡಲು ಚಿತ್ರತಂಡ ನಿರ್ಧರಿಸಿದೆ.

ABOUT THE AUTHOR

...view details