ಕರ್ನಾಟಕ

karnataka

ETV Bharat / sitara

ಮಾ.31ಕ್ಕೆ 'ಶರ್ಮಾಜಿ ನಮ್‌ಕೀನ್' ಬಿಡುಗಡೆ: ತಂದೆ ನೆನೆದು ಭಾವುಕರಾದ ನಟ ರಣಬೀರ್ ಕಪೂರ್ - ನಟ ರಣಬೀರ್ ಕಪೂರ್

ದಿವಂಗತ ನಟ ರಿಷಿ ಕಪೂರ್ ಅಭಿನಯದ 'ಶರ್ಮಾಜಿ ನಮ್‌ಕೀನ್' ಮಾ.31ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾ ಕುರಿತು ನಿರ್ಮಾಪಕ ಫರ್ಹಾನ್ ಅಖ್ತರ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು, ನಟ ರಣಬೀರ್ ಕಪೂರ್ ತಂದೆಯನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.

Ranbir Kapoor
ರಿಷಿ ಕಪೂರ್ ನೆನೆದು ಭಾವುಕರಾದ ನಟ ರಣಬೀರ್ ಕಪೂರ್

By

Published : Mar 17, 2022, 8:44 AM IST

ಮುಂಬೈ: ಬಾಲಿವುಡ್​​ನ ದಿಗ್ಗಜ ನಟ ದಿವಂಗತ ರಿಷಿ ಕಪೂರ್ ಅಭಿನಯದ ಕೊನೆಯ ಚಿತ್ರ 'ಶರ್ಮಾಜಿ ನಮ್‌ಕೀನ್' ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಸಿನಿಮಾಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕ ಫರ್ಹಾನ್ ಅಖ್ತರ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ.

ಫರ್ಹಾನ್ ಅಖ್ತರ್ ತಮ್ಮ ಇನ್​​​​​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ರಣಬೀರ್ ಚಿತ್ರದ ಕುರಿತು ಮತ್ತು ತಂದೆ ರಿಷಿ ಕಪೂರ್ ನೆನಪುಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಶರ್ಮಾಜಿ ನಮ್‌ಕೀನ್' ಬಹಳ ವಿಶೇಷವಾದ ಚಿತ್ರ. ಇದು ಅಪ್ಪನ ಕೊನೆಯ ಚಿತ್ರ ಎಂಬ ಕಾರಣಕ್ಕೆ ವಿಶೇಷವಲ್ಲ, ಆದರೆ, ಅಪ್ಪ ಸಿನಿಮಾದ ಕಥೆಯನ್ನು ಹೆಚ್ಚು ನಂಬಿದ್ದರು. ಅವರು ಮಧ್ಯದಲ್ಲಿ ಅನಾರೋಗ್ಯಕ್ಕೆ ಒಳಗಾದಾಗ ಹೇಗಾದರೂ ಮಾಡಿ ಚಿತ್ರೀಕರಣ ಪೂರ್ಣಗೊಳಿಸಬೇಕು ಎಂದು ಬಯಸಿದ್ದರು. ಇದು ಈಗಲೂ ನನಗೆ ನೆನಪಿದೆ ಎಂದು ನಟ ಭಾವುಕರಾಗಿ ಮಾತನಾಡಿದ್ದಾರೆ.

ರಿಷಿ ಕಪೂರ್ ನೆನೆದು ಭಾವುಕರಾದ ನಟ ರಣಬೀರ್ ಕಪೂರ್

ಹಿತೇಶ್ ಭಾಟಿಯಾ ನಿರ್ದೇಶಿಸಿದ 'ಶರ್ಮಾಜಿ ನಮ್‌ಕೀನ್' ಚಲನಚಿತ್ರವು ಮಾ.31ರಂದು ಪ್ರೈಮ್ ವಿಡಿಯೋದಲ್ಲಿ ಮೊದಲ ಪ್ರದರ್ಶನಗೊಳ್ಳಲಿದೆ. ಪ್ರೈಮ್ ವಿಡಿಯೋ, ಅಮೆಜಾನ್ ಓರಿನಲ್​ ಮೂವಿಯಲ್ಲಿ ಸಹ ಬಿಡುಗಡೆಯಾಗಲಿದೆ. ನಿವೃತ್ತ ಜೀವನದ ಕುರಿತಾದ ಈ ಚಿತ್ರದಲ್ಲಿ ಕಪೂರ್ ನಿಧನ ನಂತರ, ಉಳಿದ ಭಾಗಗಲ್ಲಿ ನಟ ಪರೇಶ್ ರಾವಲ್ ನಟಿಸಿದ್ದಾರೆ. ಒಂದು ಚಲನಚಿತ್ರದಲ್ಲಿ ಇಬ್ಬರು ನಟರು ಒಂದೇ ಪಾತ್ರವನ್ನು ನಿರ್ವಹಿಸಿದ ಮೊದಲ ನಿದರ್ಶನವಾಗಿದೆ.

ಇದನ್ನೂ ಓದಿ:ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾದ ಲಿಂಕ್ ವಾಟ್ಸಪ್​ನಲ್ಲಿ ಶೇರ್.. ಕ್ಲಿಕ್ ಮಾಡಿದ್ರೆ ಬೀಳುತ್ತೆ ಪಂಗನಾಮ

ABOUT THE AUTHOR

...view details