ಕರ್ನಾಟಕ

karnataka

ETV Bharat / sitara

'ಗಂಗೂಬಾಯಿ ಕಥಿಯಾವಾಡಿ' ಪೋಸ್​ ಕಾಪಿ ಮಾಡಿದ ನಟ ರಣಬೀರ್ ಕಪೂರ್ - ಗಂಗೂಬಾಯಿ ಕಥಿಯಾವಾಡಿ ಟ್ರೈಲರ್

ಆಲಿಯಾ ಭಟ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಗಂಗೂಬಾಯಿ ಕಥಿಯಾವಾಡಿ' ಟ್ರೈಲರ್ ಶುಕ್ರವಾರ ಬಿಡುಗಡೆಯಾಗಿದೆ. ಸಿನಿಮಾದ ಟ್ರೈಲರ್ ಕುರಿತು ನಟ ರಣಬೀರ್ ಕಪೂರ್‌ ಪ್ರತಿಕ್ರಿಯೆ ನೀಡಿದ್ದು ಹೀಗಿದೆ ನೋಡಿ.

ನಟ ರಣಬೀರ್ ಕಪೂರ್
ನಟ ರಣಬೀರ್ ಕಪೂರ್

By

Published : Feb 5, 2022, 6:45 AM IST

ಬಾಲಿವುಡ್​ ನಟಿ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಟ್ರೈಲರ್ ಶುಕ್ರವಾರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಆಲಿಯಾ ಮುಂಬೈನ ರೆಡ್ ಲೈಟ್ ಏರಿಯಾದ ಕಾಮಟಿಪುರದ ಪವರ್‌ಫುಲ್‌ ಮಹಿಳೆ ಗಂಗೂಬಾಯಿ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾವು ನೈಜ ಕಥೆ ಆಧಾರಿತವಾಗಿದ್ದು, ಚಿತ್ರದಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಫೆಬ್ರವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ.

ಇನ್ನು 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾದ ಟ್ರೈಲರ್ ಕುರಿತು ನಟ ರಣಬೀರ್ ಕಪೂರ್‌ ಪ್ರತಿಕ್ರಿಯೆ ನೀಡಿದ್ದು, ಸಿನಿಮಾದಲ್ಲಿ ಆಲಿಯಾ ಪೋಸ್​ ನೀಡಿದಂತೆ ಹಿಂದಕ್ಕೆ ತಿರುಗಿ ಕೈಎತ್ತಿ ನಮಸ್ಕಾರ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

ಗಂಗೂಬಾಯಿ ಕಥಿಯಾವಾಡಿ ಟ್ರೈಲರ್ ನೋಡಿ ಪ್ರತಿಕ್ರಿಯೆ ನೀಡಿದ ರಣಬೀರ್ ಕಪೂರ್‌

ABOUT THE AUTHOR

...view details