ಕರ್ನಾಟಕ

karnataka

ETV Bharat / sitara

ರಣವೀರ್ ನೋಡಿದ್ರು​ ದೀಪಿಕಾಳ ನೀಳ ಸೊಂಟ.. ಇದಕ್ಕೆ ಪದ್ಮಾವತಿ ರಿಯಾಕ್ಷನ್‌ ಹೀಗಿದೆ.. - ರಣವೀರ್​ ಸಿಂಗ್​

ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ರಾಮ್​ ಲೀಲಾ ಸಿನಿಮಾ ಶೂಟಿಂಗ್​ ವೇಳೆ ಫೋಟೋ ಒಂದನ್ನು ತೆಗೆಯಲಾಗಿದೆ. ಫೋಟೋದಲ್ಲಿ ರಣವೀರ್​ ಸಿಂಗ್​ ದೀಪಿಕಾ ಪಡುಕೋಣೆಯ ಸೊಂಟವನ್ನು ನೋಡುತ್ತಿದ್ದಾರೆ. ಈ ಫೋಟೋವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ರಣವೀರ್​ ಸಿಂಗ್​ ನೋ ಕ್ಯಾಪ್ಶನ್​ ನೀಡೆಡ್​(ಈ ಚಿತ್ರಕ್ಕೆ ಅಡಿಬರಹ ಬೇಡ) ಎಂದು ಬರೆದಿದ್ದಾರೆ.

ರಣವೀರ್ ನೋಡಿದ್ರು​ ದೀಪಿಕಾಳ ನೀಳ ಸೊಂಟ

By

Published : Oct 14, 2019, 6:15 PM IST

ಬಾಲಿವುಡ್​ನಲ್ಲಿ ಹೆಚ್ಚು ಸುದ್ದಿಯಲ್ಲಿರುವ ಜೋಡಿಗಳ ಪೈಕಿ ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ಜೋಡಿ ಕೂಡ ಇದೆ. ಇವರು ಆಗಾಗ ಏನಾದರೂ ತರ್ಲೆಗಳನ್ನು ಮಾಡುತ್ತ ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟು ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.

ಇದೀಗ ರಣವೀರ್​ ಸಿಂಗ್​​ ದೀಪಿಕಾ ಪಡುಕೋಣೆಯ ನೀಳ ಸೊಂಟವನ್ನು ನೋಡುತ್ತಿರುವ ಫೋಟೋ ಒಂದನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಇದಕ್ಕೆ ದೀಪಿಕಾ ಪಡುಕೋಣೆ ಆಶ್ಚರ್ಯಕರ ಕಮೆಂಟ್​ ಒಂದನ್ನು ಮಾಡಿದ್ದಾರೆ.

ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ರಾಮ್​ ಲೀಲಾ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಶೂಟಿಂಗ್​ ವೇಳೆ ಫ್ರೀ ಇದ್ದ ಸಮಯದಲ್ಲಿ ಈ ಇಬ್ಬರ ಫೋಟೋ ಒಂದನ್ನು ತೆಗೆಯಲಾಗಿದೆ. ಫೋಟೋದಲ್ಲಿ ರಣವೀರ್​ ಸಿಂಗ್​ ದೀಪಿಕಾ ಪಡುಕೋಣೆಯ ಸೊಂಟವನ್ನು ನೋಡುತ್ತಿದ್ದಾರೆ. ಈ ಫೋಟೋವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ರಣವೀರ್​ ಸಿಂಗ್​ ನೋ ಕ್ಯಾಪ್ಶನ್​ ನೀಡೆಡ್​(ಈ ಚಿತ್ರಕ್ಕೆ ಅಡಿಬರಹ ಬೇಡ) ಎಂದು ಬರೆದಿದ್ದಾರೆ.

ಇದಕ್ಕೆ ಆಶ್ಚರ್ಯಕರವಾದ ಕಮೆಂಟ್​ ಮಾಡಿರುವ ದೀಪಿಕಾ ಪಡುಕೋಣೆ "ಕಳೆದ 7 ವರ್ಷದಿಂದ ಯಾವುದೇ ಬದಲಾವಣೆ ಇಲ್ಲ. ನೀನು ನನ್ನ ನೋಡುತ್ತಿರುವೆ. ನಾನು ನಿನ್ನ ನೋಡುತ್ತಿದ್ದೇನೆ" ಎಂದು ಬರೆದಿದ್ದಾರೆ.ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದ್ದು, ನೆಟ್ಟಿಗರಿಂದ ಕಮೆಂಟ್​ಗಳ ಸುರಿಮಳೆಯಾಗತ್ತಿದೆ. ​

ABOUT THE AUTHOR

...view details