ಹೈದರಾಬಾದ್:ದಕ್ಷಿಣ ಭಾರತ ಹಾಗೂ ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಅವರ ಭಾವಿ ಪತ್ನಿಯ ಪೋಟೊ ಇದೀಗ ರಿವೀಲ್ ಮಾಡಿದ್ದಾರೆ.
ಲಾಕ್ಡೌನ್ ವೇಳೆ 'ಮನದರಸಿ' ಪರಿಚಯಿಸಿದ ಬಲ್ಲಾಳದೇವ... ರಾಣನೆದೆಗೆ ಬಾಣ ಬಿಟ್ಟ ಚೆಲುವೆ ಇವಳು! - ನಿಶ್ಚಿತಾರ್ಥ
ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು, ಇದರ ಮಧ್ಯೆ ನಟ ರಾಣಾ ದಗ್ಗುಬಾಟಿ ಶುಭ ಸುದ್ದಿ ನೀಡಿದ್ದಾರೆ.

ಸ್ನೇಹಿತೆ ಮಿಹೀಕಾ ಬಜಾಜ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಾಣಾ ದಗ್ಗುಬಾಟಿ ಇದೀ ದಾಂಪತ್ಯ ಜೀವನಕ್ಕೆ ಕಾಲಿಡುವ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದ ರಾಣಾ ದಗ್ಗುಬಾಟಿ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿರುವ ಕಾರಣ ಅನೇಕರು ಅವರಿಗೆ ವಿಶ್ ಮಾಡಿದ್ದಾರೆ.
ಉದ್ಯಮಿಯಾಗಿರುವ ಮಿಹೀಕಾ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಸದ್ಯ ಮುಂಬೈನಲ್ಲಿ ವಾಸವಾಗಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಕೂಡ ಇದೆ. ಬಾಹುಬಲಿ ಚಿತ್ರದಲ್ಲಿ ಬಲ್ಲಾಳದೇವನ ಪಾತ್ರ ಮಾಡಿದ ಮೇಲೆ ಅವರ ಜನಪ್ರಿಯತೆ ಹೆಚ್ಚಾಗಿದ್ದು, ಅನೇಕ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಇವರು ಟ್ವೀಟ್ ಮಾಡುತ್ತಿದ್ದಂತೆ ನಟಿ ಸಮಂತಾ, ಅನಿಲ್ ಕಪೂರ್, ತಮನ್ನಾ ಸೇರಿದಂತೆ ಅನೇಕರು ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.