ಬೆಂಗಳೂರು: ದಶಕಗಳ ಕಾಲ ಸ್ಯಾಂಡಲ್ವುಡ್ ಕ್ವೀನ್ ಆಗಿ ಮೆರೆದ ನಟಿ, ಮೋಹಕ ತಾರೆ ರಮ್ಯಾ, ಒಂದು ವರ್ಷದಿಂದ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಆದರೆ, ಕಳೆದ ತಿಂಗಳಿನಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಆಕ್ವೀವ್ ಆಗಿದ್ದಾರೆ.
ಇದೀಗ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ, ಪೋಸ್ಟ್ವೊಂದಕ್ಕೆ ರಮ್ಯಾ ಕಾಮೆಂಟ್ ಹಾಕುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸುಂದರ ಫೋಟೋ ಹಾಕುವ ಮೂಲಕ, ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ತಮ್ಮ ಟ್ವಿಟ್ಟರ್ಖಾತೆಯಲ್ಲಿ 'ವಜ್ರದಂತೆ ಪ್ರಕಾಶ ಮಾನವಾಗಿ ಹೊಳೆಯಿರಿ' ಎಂಬ ಕ್ಯಾಪ್ಷನ್ ಜೊತೆಗೆ ಪೋಟೋವೊಂದನ್ನು ಪೋಸ್ಟ್ ಮಾಡಿದ್ದರು.