ಕರ್ನಾಟಕ

karnataka

ETV Bharat / sitara

ಈ ಟ್ವೀಟ್​ನಲ್ಲಿ ಅಂತಹ ತಪ್ಪೇನಿದೆ? ಚೇತನ್​ ಬಂಧನ ಖಂಡಿಸಿದ ರಮ್ಯಾ - ನಟ ಚೇತನ್ ಟ್ವೀಟ್​ಗಳು

ಆಗಾಗ ಟ್ವೀಟ್​ನಲ್ಲಿ ಹರಿಹಾಯುವ ಸ್ಯಾಂಡಲ್​ವುಡ್​ ನಟಿ ರಮ್ಯಾ ಇದೀಗ ಮತ್ತೊಂದು ವಿಷಯ ಪ್ರಸ್ತಾಪಿಸಿ ಟ್ವೀಟ್​ ಮಾಡಿದ್ದಾರೆ. ನಟ ಚೇತನ್ ಅವರನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಖಂಡಿಸಿ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

Ramya Standing For Actor Chetan
Ramya Standing For Actor Chetan

By

Published : Feb 23, 2022, 6:51 PM IST

Updated : Feb 24, 2022, 1:06 PM IST

ನ್ಯಾಯಮೂರ್ತಿಗಳಿಗೆ ಅಗೌರವ ತೋರುವಂತಹ ಟ್ವೀಟ್​ ಮಾಡಿದ ಆರೋಪದ ಹಿನ್ನೆಲೆಯಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ನಟ ಚೇತನ್ ಪರ ಸ್ಯಾಂಡಲ್​ವುಡ್​ ನಟಿ ರಮ್ಯಾ ಬ್ಯಾಟ್ ಬೀಸಿದ್ದಾರೆ.

ಚೇತನ್ ಟ್ವೀಟ್​ ಜೊತೆಗೆ ರೀ ಟ್ವೀಟ್​ ಮಾಡಿರುವ ರಮ್ಯಾ ಅವರು ಇದರಲ್ಲಿ ಅಂತಹ ತಪ್ಪು ಏನಿದೆ? ಪೊಲೀಸರು ಯಾವ ಕಾರಣಕ್ಕಾಗಿ ಅವರನ್ನು ಬಂಧಿಸಿದ್ದಾರೆ ಎಂಬ ಅರ್ಥದಲ್ಲಿ ಪ್ರಶ್ನೆ ಮಾಡಿದ್ದಾರೆ.

ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದ ತೀರ್ಪನ್ನು ಪ್ರಶ್ನಿಸಿ, ನಟ ಚೇತನ್ ಎರಡು ವರ್ಷಗಳ ಹಿಂದೆ ಟ್ಟೀಟ್ ಮಾಡಿದ್ದರು. ಈಗ ಹಿಜಾಬ್ ಅರ್ಜಿ ವಿಚಾರಣೆ ನಡೆಸುತ್ತಿರುವ ಅದೇ ಹೈಕೋರ್ಟ್ ನ್ಯಾಯಮೂರ್ತಿಯವರ ಬಗ್ಗೆ ಟ್ಟೀಟ್ ಮಾಡಿದ್ದರು. ಪತ್ನಿ ಮೇಘಾ ಸಹ ಪೊಲೀಸರ ಮೇಲೆ ಆರೋಪ ಮಾಡಿ ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

Last Updated : Feb 24, 2022, 1:06 PM IST

ABOUT THE AUTHOR

...view details