ದೊಡ್ಮನೆಯ ಹುಡುಗಿ ಧನ್ಯಾ ರಾಮಕುಮಾರ್ ಮಾಧ್ಯಮದ ಮುಂದೆ ‘ನಿನ್ನ ಸನಿಹಕೆ' ಸಿನಿಮಾ ಮೂಲಕ ಪರಿಚಯ ಆಗಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಈ ಚಿತ್ರದ ಮೊದಲ ಲುಕ್ ರಿಲೀಸ್ ಆಯಿತು. ವಿಶೇಷತೆಯಿಂದ ಕೂಡಿದ್ದ ಈ ಕಾರ್ಯಕ್ರಮದಲ್ಲಿ ಧನ್ಯಾ ಅವರ ಅಪ್ಪ ಹೆಸರಾಂತ ನಟ ರಾಮಕುಮಾರ್ ಮತ್ತು ಸಹೋದರ ಧೀರನ್ ರಾಮಕುಮಾರ್ ಹಾಜರು ಇರಲಿಲ್ಲ. ಮಗಳ ಚೊಚ್ಚಲ ಚಿತ್ರದ ಪೋಸ್ಟರ್ ಅನಾವರಣದಿಂದ ಅವರು ಯಾಕೆ ದೂರು ಉಳಿದಿದ್ದರು ಎಂಬುದಕ್ಕೆ ಸದ್ಯ ಉತ್ತರ ಸಿಕ್ಕಿದೆ.
ರಾಮಕುಮಾರ್ ಅವರ ತಂದೆ ಶೃಂಗಾರ್ ನಾಗರಾಜ್ ನಿರ್ಮಾಣ ಮಾಡಿದ ‘ಪುಷ್ಪಕ ವಿಮಾನ’ ಚಿತ್ರವನ್ನು ಡಿಜಿಟಲ್ ಪ್ರಿಂಟ್ಗೆ ಕನ್ವರ್ಟ್ ಮಾಡಿ, ಅದಕ್ಕೆ ಆಧುನಿಕ ಸೌಂಡ್, ಕಲರ್ ತುಂಬಿಸಿ ನವಂಬರ್ ತಿಂಗಳಿನಲ್ಲಿ ಮರುಬಿಡುಗಡೆ ಕೆಲಸದಲ್ಲಿ ರಾಮಕುಮಾರ್ ತೊಡಗಿಕೊಂಡಿದ್ದಾರಂತೆ. ಅಪ್ಪನ ಜತೆ ಧೀರನ್ ಕೂಡ ಈ ಕೆಲಸದಲ್ಲಿ ಬ್ಯುಸಿಯಾಗಿದ್ದರಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲವಂತೆ.