ಡಾ. ರಾಜ್ ಕುಮಾರ್ ಕುಟುಂಬದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹೆಣ್ಣುಮಗಳು ಅಂದ್ರೆ ಅದು ಧನ್ಯಾ ರಾಮ್ ಕುಮಾರ್. ರಾಮ್ ಕುಮಾರ್ ಹಾಗು ಪೂರ್ಣಿಮಾ ಮುದ್ದಿನ ಮಗಳಾಗಿರೋ ಧನ್ಯಾ ರಾಮ್ ಕುಮಾರ್, ಅಣ್ಣಾವ್ರ ಫ್ಯಾಮಿಲಿಯಲ್ಲಿ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿರುವ ಮೊದಲ ಹೆಣ್ಣುಮಗಳು. ಸದ್ಯ 'ನಿನ್ನ ಸನಿಹಕೆ' ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ನಟನೆಗೆ ಅಪ್ಪನೇ ಸಲಹೆಗಳನ್ನು ಕೊಟ್ಟಿದ್ದು... ಗಾಸಿಪ್ಗೆ ತೆರೆ ಎಳೆದ್ರು ರಾಮ್ ಕುಮಾರ್ ಪುತ್ರಿ - dhanya ram kumar
'ನಿನ್ನ ಸನಿಹಕೆ' ಸಿನಿಮಾದಲ್ಲಿ ಹಿರಿಯ ನಟ ರಾಮ್ ಕುಮಾರ್ ಮಗಳು ಧನ್ಯಾ ಅಭಿನಯಿಸುತ್ತಿದ್ದಾರೆ. ನಟನೆ ಬಗ್ಗೆ ತಂದೆ ರಾಮ್ ಕುಮಾರ್ ಕೂಡ ಕೆಲವು ಟಿಪ್ಸ್ ಕೊಟ್ಟಿದ್ದರಂತೆ. ಈ ವಿಷಯವನ್ನು ಧನ್ಯಾ ರಾಮಕುಮಾರ್ ಹೇಳಿಕೊಂಡಿದ್ದಾರೆ.
ಈ ಹಿಂದೆ ಧನ್ಯಾರಾಮ್ ಸಿನಿಮಾ ಇಂಡಸ್ಟ್ರಿಗೆ ಬರೋದು ತಂದೆಗೆ ಇಷ್ಟವಿಲ್ಲ ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಆದ್ರೆ ಇದೀಗ ಇಂತಹ ಗಾಳಿ ಸುದ್ದಿಗಳಿಗೆ ಬ್ರೇಕ್ ಬಿದ್ದಿದ್ದು, ಸ್ವತಃ ರಾಮ್ಕುಮಾರ್ ಮಗಳ ಆ್ಯಕ್ಟಿಂಗ್ ನೋಡಿ ಖುಷಿ ಪಟ್ಟಿದ್ದಾರಂತೆ.
ಧನ್ಯಾ ಸಿನಿಮಾ ಶೂಟಿಂಗ್ ಟೈಮಲ್ಲಿ ರಾಮ್ ಕುಮಾರ್ ಭೇಟಿ ಕೊಟ್ಟು ಮಗಳ ಅಭಿನಯ ನೋಡಿ ಕೆಲವು ಟಿಪ್ಸ್ಗಳನ್ನೂ ಕೊಟ್ಟಿದ್ದಾರಂತೆ. ತಂದೆ ರಾಮ್ ಕುಮಾರ್ ಸಿನಿಮಾ ಶೂಟಿಂಗ್ ಸ್ಪಾಟ್ಗೆ ಬಂದಾಗ ಧನ್ಯಾಗೆ ಸ್ವಲ್ಪ ಭಯ ಆಗಿತ್ತಂತೆ. ಆದರೆ ಶೂಟಿಂಗ್ ಮುಗಿಸಿ ಮನೆಗೆ ಹೋದಾಗ ರಾಮ್ ಕುಮಾರ್ ನಟನೆ ಕುರಿತಂತೆ ಕೆಲವು ಸಲಹೆಗಳನ್ನ ಕೊಟ್ಟಿದ್ದರಂತೆ.
TAGGED:
dhanya ram kumar