ಉಪೇಂದ್ರ ಸ್ಥಾಪಿಸಿರುವ ಪ್ರಜಾಕೀಯ ಪಕ್ಷದ ಬಗ್ಗೆ ಕನ್ನಡಿಗರಲ್ಲಿ ಸಾಕಷ್ಟು ಸಂಶಯ ಮತ್ತು ಗೊಂದಲಗಳಿವೆ. ಆದರೆ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಮಾತ್ರ ಉಪೇಂದ್ರ ನೇತೃತ್ವದ ಪ್ರಜಾಕೀಯ ಪಕ್ಷದ ಉದ್ದೇಶಗಳನ್ನು ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ.
ಉಪೇಂದ್ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ದೇಶಕ ರಾಮ್ಗೋಪಾಲ್ ವರ್ಮಾ - Prajakeeya new website started
ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಪಕ್ಷದ ಹೊಸ ವೆಬ್ಸೈಟ್ವೊಂದನ್ನು ಸ್ಥಾಪಿಸಿದ್ದು ಇದರ ಬಗ್ಗೆ ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಉಪೇಂದ್ರ, ತಮ್ಮ ಪ್ರಜಾಕೀಯ ಪಕ್ಷದ ಹೊಸ ವೆಬ್ಸೈಟ್ ಪ್ರಾರಂಭಿಸಿದ್ದಾರೆ. ಓಆರ್ಜಿ ಹೆಸರಿನ ಈ ವೆಬ್ಸೈಟ್ನಲ್ಲಿ ಪಕ್ಷದ ಉದ್ದೇಶಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ವೆಬ್ಸೈಟ್ ನೋಡಿ, ಪಕ್ಷದ ಬಗ್ಗೆ ರಾಮ್ಗೋಪಾಲ್ ವರ್ಮಾ ಮೆಚ್ಚುಗೆ ಸೂಚಿದ್ದಾರೆ. ಈ ಪಕ್ಷವನ್ನು ಹಣ ರಹಿತ ಪಕ್ಷ ಎಂದು ಹೇಳಿಕೊಂಡಿರುವ ಉಪೇಂದ್ರ, ಈ ಪಕ್ಷದಲ್ಲಿ ಕಾರ್ಯಕರ್ತರು, ಬ್ಯಾನರ್ಗಳು, ಸ್ಥಳೀಯ ಕಚೇರಿಗಳು, ಮೆರವಣಿಗೆ ಹಾಗೂ ಸುಳ್ಳು ಆಶ್ವಾಸನೆಗಳು ಯಾವುದೂ ಇರುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ವೆಬ್ಸೈಟ್ ನೋಡಿ ಯಾರು ಬೇಕಾದರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕ ರಾಮ್ಗೋಪಾಲ್ ವರ್ಮಾ, "ಪ್ರಜಾಕೀಯ ಪಕ್ಷವು ಕ್ರಾಂತಿಯ ಹೊಸ ಮಾರ್ಗದತ್ತ ಮುನ್ನುಗುತ್ತಿದೆ, ಉಪೇಂದ್ರ ಅವರೇ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.