ಹೈದರಾಬಾದ್: 'ಇಸ್ಮಾರ್ಟ್ ಶಂಕರ್' ಸಕ್ಸಸ್ ಪಾರ್ಟಿವಿಡಿಯೋವನ್ನ ರಜನಿಯವರ ಚಂದ್ರಮುಖಿ ಸಿನಿಮಾದ ಕ್ಲೈಮಾಕ್ಸ್ ಸೀನ್ಗೆ ಮಿಕ್ಸ್ ಮಾಡಿದ ವರ್ಮಾ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ರಾಮ್ ಪೊತಿನೇನಿ ನಾಯನಾಗಿ ನಟಿಸಿರುವ 'ಇಸ್ಮಾರ್ಟ್ ಶಂಕರ್' ಸಿನಿಮಾವನ್ನು ಪೂರಿ ಜಗನ್ನಾಥ್ ನಿರ್ದೇಶಿಸಿದ್ದಾರೆ. ನಿಧಿ ಅಗರ್ವಾಲ್, ನಭಾ ನಟೇಶ್ನಾಯಕಿಯರಾಗಿದ್ದು, ಪೂರಿ ಹಾಗೂ ನಟಿ ಚಾರ್ಮಿ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಈ ಸಿನಿಮಾ ಗುರುವಾರ ತೆರೆ ಕಂಡಿದ್ದು, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಕೇವಲ ಎರಡು ದಿನದಲ್ಲಿ 25 ಕೋಟಿ ಗಡಿ ದಾಟಿದೆ. ಈ ಹಿನ್ನಲೆ ಶುಕ್ರವಾರ ರಾತ್ರಿ ಆಯೋಜಿಸಿದ್ದ ಸಕ್ಸಸ್ ಮೀಟ್ ಪಾರ್ಟಿಯಲ್ಲಿ ರಾಮ್ಗೋಪಾಲ್ ವರ್ಮಾ ತಲೆಯ ಮೇಲೆ ಬೀರ್ ಸುರಿದುಕೊಂಡು ಎಂಜಾಯ್ ಮಾಡಿದ್ದಾರೆ.
ಇನ್ನು ತಲೆಯ ಮೇಲೆ ಬೀರ್ ಸುರಿದುಕೊಂಡು ಎಂಜಾಯ್ ಮಾಡಿರುವ ವಿಡಿಯೋವನ್ನು ಚಂದ್ರಮುಖಿ ಸಿನಿಮಾದ ಕ್ಲೈಮಾಕ್ಸ್ಗೆ ಮಿಕ್ಸ್ ಮಾಡಿರುವ ವರ್ಮಾ ಅಭಿಮಾನಿಗಳೊಂದಿಗೆ ಈ ರೀತಿ ಹಂಚಿಕೊಂಡಿದ್ದಾರೆ.