ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರೋ ಸಿನಿಮಾ '100'. ಟ್ರೇಲರ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಹವಾ ಸೃಷ್ಟಿಸಿರೋ 100 ಸಿನಿಮಾವನ್ನ ರಮೇಶ್ ಅರವಿಂದ್( Ramesh Aravind) ನಟಿಸಿ ನಿರ್ದೇಶನ ಮಾಡಿದ್ದಾರೆ. ಶಿವಾಜಿ ಸುರತ್ಕಲ್ ಸಿನಿಮಾ ಬಳಿಕ, ರಮೇಶ್ ಅರವಿಂದ್ ಮತ್ತೆ ಖಾಕಿ ತೊಟ್ಟು ತನಿಖೆ ಮಾಡೋದಕ್ಕೆ ಸಜ್ಜಾಗಿದ್ದಾರೆ.
ಇದೇ ನವೆಂಬರ್ 19ರಂದು ಬಿಡುಗಡೆ ಆಗಲು ಸಜ್ಜಾಗಿರೋ ಸಿನಿಮಾದ ವಿಶೇಷತೆ ಬಗ್ಗೆ ಮಾತನಾಡೋದಕ್ಕೆ ನಟ ಹಾಗು ನಿರ್ದೇಶಕ ರಮೇಶ್ ಅರವಿಂದ್, ನಿರ್ಮಾಪಕ ರಮೇಶ್ ರೆಡ್ಡಿ(producer Ramesh Reddy) ಹಾಗು ನಟಿ ಪೂರ್ಣ(Actress Poorna)ಉಪಸ್ಥಿತದ್ದರು. ಸೈಬರ್ ಕಥೆ ಆಧರಿಸಿರೋ 100 ಸಿನಿಮಾ ಕಥೆ, ಪ್ರತಿಯೊಬ್ಬರಿಗೆ ಲಿಂಕ್ ಆಗುವ ಕಥೆ. ಮೊಬೈಲ್ ಎಂಬ ಸೋಷಿಯಲ್ ಮೀಡಿಯಾ ಬಳಸುವಾಗ ಬಹಳ ಜಾಗೃತವಾಗಿರಬೇಕು ಎಂಬುದು ಕಥೆಯ ತಿರುಳು.
ತಮಿಳು ರೈಟರ್ ಸುಶಿ ಗಣೇಶ್ ಅವರ ಸಿನಿಮಾದ ಕಥೆಯ ರೈಟ್ಸ್ ಅನ್ನು ರಮೇಶ್ ಅರವಿಂದ್ ತೆಗೆದುಕೊಂಡು ಈ 100 ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದು, ತೆಲುಗು ನಟಿ ಪೂರ್ಣ ರಮೇಶ್ ಅರವಿಂದ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.