ಕರ್ನಾಟಕ

karnataka

ETV Bharat / sitara

ರಮೇಶ್ ಅರವಿಂದ್ ನಿರ್ದೇಶನ ಮಾಡಿ ಅಭಿನಯಿಸಿರುವ '100' ಶೂಟಿಂಗ್​​ ಫಿನೀಶ್​​ - ramesh aravind direction '100' movie shooting complete

ಕನ್ನಡದಲ್ಲಿ ಮೂಡಿಬರುತ್ತಿರುವ 100 ಸಿನಿಮಾವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ರಮೇಶ್​​​ ಪೊಲೀಸ್ ಅಧಿಕಾರಿ. ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ (ನಂಗ್ಲಿ) ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ramesh aravind direction '100' movie shooting complete
ರಮೇಶ್ ಅರವಿಂದ್, ರಚಿತ ರಾಮ್ ಹಾಗೂ ಪೂರ್ಣ

By

Published : Dec 3, 2019, 11:07 AM IST

ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಮೇಶ್ ಅರವಿಂದ್, ರಚಿತ ರಾಮ್ ಹಾಗೂ ಪೂರ್ಣ ಅಭಿನಯದ ಸಿನಿಮಾ ‘100’ ಚಿತ್ರೀಕರಣ ಪೂರ್ಣಗೊಳಿಸಿದೆ. ಈ ಸಿನಿಮಾ ತಮಿಳಿನ ‘ತಿರುಟ್ಟು ಪಯಲೆ 2’ ಚಿತ್ರದ ರೀಮೇಕ್. ಸೂಸಿ ಗಣೇಶನ್ ನಿರ್ದೇಶನ ಮಾಡಿದ ಈ ಸಿನಿಮಾ ಕಳೆದ 2017ರಲ್ಲಿ ಬಿಡುಗಡೆಯಾಗಿತ್ತು.

ನಿಷ್ಠಾವಂತ ಪೊಲೀಸ್ ಅಧಿಕಾರಿಯ ಸುತ್ತ ಇರುವ ಕಥಾವಸ್ತು ಇದಾಗಿದ್ದು, ಸಿನಿಮಾದಲ್ಲಿ ಫೋನ್ ಟ್ಯಾಪಿಂಗ್ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಕತ್ತಿ ಹಾಗೂ ಬೆಂಕಿ ಸಿಗಬಾರದವರ ಕೈಗೆ ಸಿಕ್ಕರೆ ಏನು ಫಜೀತಿ ಆಗುತ್ತದೆ ಎಂಬುದು ಚಿತ್ರದ ಒನ್​​ಲೈನ್ ಸ್ಟೋರಿ.

ಈ ಚಿತ್ರದಲ್ಲಿ ಸೈಬರ್ ಕ್ರೈಂ ಬಗ್ಗೆ ಸಹ ಪ್ರಸ್ತಾಪ ಇದೆ. ಈ ಸಿನಿಮಾವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ರಮೇಶ್​​​ ಪೊಲೀಸ್ ಅಧಿಕಾರಿ. ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ (ನಂಗ್ಲಿ) ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ರಮೇಶ್ ಅರವಿಂದ್, ರಚಿತ ರಾಮ್ ಹಾಗೂ ಪೂರ್ಣ

ಈ ಸಿನಿಮಾ ಮೂಲಕ ವಿಶ್ವ ಖಳ ನಟನಾಗಿ ಪರಿಚಯ ಆಗುತ್ತಿದ್ದಾರೆ. ಇನ್ನು ಪೂಜಾ, ಲಕ್ಷ್ಮಿ ಆನಂದ್, ಅಮಿತ ರಂಗನಾಥ್, ಸುಕನ್ಯ ಗಿರೀಶ್​, ಪಿ ಡಿ ಸತೀಶ್, ರಾಜೇಶ್ ರಾವ್, ಬೇಬಿ ಸ್ಮಯ ತಾರಗಣದಲಿದ್ದಾರೆ.

ಗುರು ಕಶ್ಯಪ್ ಸಂಭಾಷಣೆ, ಸತ್ಯ ಹೆಗ್ಡೆ ಛಾಯಾಗ್ರಾಹಕರು, ರವಿ ವರ್ಮಾ ಸಾಹಸ ಹಾಗೂ ಈ ಸಿನಿಮಾದಲ್ಲಿ ರವಿ ಬಸ್ರೂರ್ ಎರಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.

ರಮೇಶ್ ಅರವಿಂದ್, ರಚಿತ ರಾಮ್ ಹಾಗೂ ಪೂರ್ಣ

ABOUT THE AUTHOR

...view details