ಬೆಂಗಳೂರು:ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ರಮೇಶ್ ಅರವಿಂದ್ ಮನೆಯಲ್ಲಿ ಇಂದು ಮದುವೆ ಸಂಭ್ರಮ ಮನೆ ಮಾಡಿತ್ತು.
ಕೆಲ ದಿನಗಳ ಹಿಂದೆ ಬನಶಂಕರಿಯ ನಿವಾಸದಲ್ಲಿ ಮೆಹಂದಿ ಕಾರ್ಯಕ್ರಮ ಮಾಡುವ ಮೂಲಕ ಮಗಳ ಮದುವೆ ವಿಷಯವನ್ನು ರಮೇಶ್ ಹಂಚಿಕೊಂಡಿದ್ದರು. ಇಂದು ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ಪುತ್ರಿ ನಿಹಾರಿಕ ಶುಭ ಲಗ್ನದಲ್ಲಿ ಅಕ್ಷಯ್ ಜೊತೆ ಸಪ್ತಪದಿ ತುಳಿದರು. ಮದುವೆ ಸಮಾರಂಭದಲ್ಲಿ ರಮೇಶ್ ಅರವಿಂದ್ ಮಗಳು ನಿಹಾರಿಕಾ ಜೊತೆ ಮಸ್ತ್ ಡ್ಯಾನ್ಸ್ ಮಾಡಿ ಖುಷಿಪಟ್ಟರು.
ನೋಡಿ : ಅಕ್ಷಯ್ ಜೊತೆ ಸಪ್ತಪದಿ ತುಳಿದ ನಿಹಾರಿಕಾ: ರಮೇಶ್ ಅರವಿಂದ್ ಮನೆಯಲ್ಲಿನ ಮಧುರ ಕ್ಷಣಗಳು
ನಿಹಾರಿಕ ಹಾಗೂ ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂದು ನವಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡೂ ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ಖಾಸಗಿ ಹೋಟೆಲ್ನಲ್ಲಿ ನಿಹಾರಿಕಾ ಮದುವೆ ನಡೆಯಿತು. ಕೋವಿಡ್ ಕಾರಣ ರಮೇಶ್ ಅರವಿಂದ್ ಹಾಗೂ ಅಕ್ಷಯ್ಕೆಲ ಸಂಬಂಧಿಗಳು ಮಾತ್ರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಿನಿಮಾ ಇಂಡಸ್ಟ್ರಿ ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದೆ.