ಕರ್ನಾಟಕ

karnataka

ETV Bharat / sitara

ರಮೇಶ್​ ಅರವಿಂದ್ ಈಗ ಸೂಪರ್ ​​​ಕಾಪ್​​: ಹೊಸ ಚಿತ್ರಕ್ಕೆ ಮುಹೂರ್ತ - undefined

ರಮೇಶ್ ಅರವಿಂದ್ ಅಭಿನಯದ ಹೊಸ ಚಿತ್ರಕ್ಕೆ ನಿನ್ನೆ ಮುಹೂರ್ತ ನೆರವೇರಿದೆ. '100' ಹೆಸರಿನ ಈ ಸಿನಿಮಾದಲ್ಲಿ ರಮೇಶ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ರಚಿತಾ ರಾಮ್ ಹಾಗೂ ಪೂರ್ಣ ಈ ಸಿನಿಮಾದಲ್ಲಿ ರಮೇಶ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ರಮೇಶ್ ಅರವಿಂದ್

By

Published : Jun 20, 2019, 8:45 AM IST

ಸ್ಯಾಂಡಲ್​ವುಡ್​​​​ನಲ್ಲಿ ಮಿನಿಮಂ ಗ್ಯಾರಂಟಿ ಹೀರೋ ಅಂದ್ರೆ ತಕ್ಷಣ ನೆನಪಾಗುವುದು ರಮೇಶ್ ಅರವಿಂದ್. ನಟನೆ, ನಿರೂಪಣೆ, ನಿರ್ದೇಶನ ಹೀಗೆ ಹಲವು ಕ್ಷೇತ್ರಗಳಲ್ಲಿ ಬ್ಯುಸಿಯಾಗಿರುವ ರಮೇಶ್ ಅರವಿಂದ್​​​ಗೆ ಸ್ಯಾಂಡಲ್​​​​ವುಡ್​​​ನಲ್ಲಿ ಇಂದಿಗೂ ಬೇಡಿಕೆ ಕಡಿಮೆಯಾಗಿಲ್ಲ.

'100' ಚಿತ್ರದ ಮುಹೂರ್ತ

ಖಾಸಗಿ ವಾಹಿನಿಯಲ್ಲಿ ರಿಯಾಲಿಟಿ ಶೋ ನಡೆಸಿಕೊಡುತ್ತಿರುವ ರಮೇಶ್ ಅರವಿಂದ್ ಇದರ ನಡುವೆಯೂ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಸಿನಿಮಾ ನಿರ್ದೇಶನವನ್ನೂ ಮಾಡ್ತಿದ್ದಾರೆ. ಇತ್ತೀಚೆಗಷ್ಟೆ ಮೂರು ಭಾಷೆಯಲ್ಲಿ ಬಟರ್ ಫ್ಲೈ ಸಿನಿಮಾ ನಿರ್ದೇಶನ ಮಾಡಿರುವ ರಮೇಶ್, 'ಶಿವಾಜಿ ಸೂರತ್ಕಲ್' ಎಂಬ ಚಿತ್ರದಲ್ಲಿ ಡಿಟೆಕ್ಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಚಿತ್ರಗಳು ರಿಲೀಸ್ ಆಗಬೇಕಿದ್ದು, ಈ ಗ್ಯಾಪ್​​ನಲ್ಲಿ ರಮೇಶ್ ಅರವಿಂದ್ 100ಕ್ಕೆ ಡಯಲ್ ಮಾಡಿದ್ದಾರೆ. ಹೌದು, ರಮೇಶ್ ಈಗ ಮತ್ತೊಂದು ಸಿನಿಮಾ ನಿರ್ದೇಶನದ ಜೊತೆ ನಟನೆಯನ್ನೂ ಮಾಡುತ್ತಿದ್ದು, ನಿನ್ನೆ ಈ ಸಿನಿಮಾದ ಮುಹೂರ್ತ ನೆರವೇರಿದೆ.

ಪೂರ್ಣ, ರಮೇಶ್ ಅರವಿಂದ್

ಡಿಟೆಕ್ಟಿವ್ ಪಾತ್ರದ ನಂತರ ಸೈಬರ್ ಸೂಪರ್ ಕಾಪ್ ಆಗಿ ರಮೇಶ್ ಅರವಿಂದ್ ನಟಿಸುತ್ತಿರುವ ಈ ಚಿತ್ರಕ್ಕೆ ‘100’ ಎಂಬ ಟೈಟಲ್​ ಫಿಕ್ಸ್‌ ಮಾಡಲಾಗಿದೆ. ನಿನ್ನೆ ಬೆಂಗಳೂರಿನ ಬನಶಂಕರಿ ಮಂಜುನಾಥ ದೇಗುಲದಲ್ಲಿ ಮುಹೂರ್ತ ನೆರವೇರಿತು. ಇದು ಸೈಬರ್ ಕ್ರೈಂ ಕಥೆಯನ್ನು ಹೊಂದಿದೆ. 'ಭೈರಾದೇವಿ' ಚಿತ್ರದಲ್ಲೂ ರಮೇಶ್ ಖಾಕಿ ಧರಿಸಿದ್ದಾರೆ. ತಮಿಳಿನ 'ತಿರುಟ್ಟುಪಯ್ಯಾಲೆ- 2' ಸಿನಿಮಾದ ಥ್ರಿಲ್ಲರ್ ಎಳೆಯನ್ನು ಇಟ್ಟುಕೊಂಡು ರಮೇಶ್ ಅರವಿಂದ್ '100' ಚಿತ್ರಕ್ಕೆ ಸ್ಕ್ರೀನ್ ಪ್ಲೇ ಬರೆದಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಸುವರ್ಣ ಸುಂದರಿ ಖ್ಯಾತಿಯ ಪೂರ್ಣ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಕ್ಯಾಮರಾ ವರ್ಕ್ ಇದ್ದು, ಮೊದಲ ಬಾರಿಗೆ ರಮೇಶ್ ಅರವಿಂದ್ ಜೊತೆ ಕೆಲಸ ಮಾಡುತ್ತಿದ್ದಾರೆ. 'ಪಡ್ಡೆಹುಲಿ', 'ನಾತಿಚರಾಮಿ', 'ಉಪ್ಪು ಹುಳಿ ಖಾರ' ಚಿತ್ರವನ್ನು ನಿರ್ಮಿಸಿದ್ದ ರಮೇಶ್ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಇಂದಿನಿಂದ ಚಿತ್ರೀಕರಣ ಆರಂಭವಾಗಲಿದೆ.

For All Latest Updates

TAGGED:

ABOUT THE AUTHOR

...view details