ಇಂದು ಗೌರಿ-ಗಣೇಶ ಹಬ್ಬದೊಂದಿಗೆ ಕಿಚ್ಚ ಸುದೀಪ್ ಜನ್ಮದಿನ ಕೂಡಾ. ಒಂದೆಡೆ ಕಿಚ್ಚನ ಅಭಿಮಾನಿಗಳು ಮೆಚ್ಚಿನ ನಟನ ಬರ್ತಡೇ ಆಚರಿಸುತ್ತಿದ್ದರೆ, ಮತ್ತೊಂದೆಡೆ ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೂಡಾ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.
ಇಂದು ಪವರ್ ಸ್ಟಾರ್ಗೆ ಜನ್ಮದಿನದ ಸಂಭ್ರಮ...ಚಿಕ್ಕಪ್ಪನಿಗೆ ಪ್ರೀತಿಯಿಂದ ಶುಭ ಕೋರಿದ ರಾಮ್ಚರಣ್ ತೇಜ - ಪ್ಯಾರಾ ಗ್ಲೈಡಿಂಗ್
ಇಂದು ಪವರ್ ಸ್ಟಾರ್ ಪವನ್ ಕಲ್ಯಾಣ್ಗೆ 48ನೇ ವರ್ಷದ ಜನ್ಮದಿನದ ಸಂಭ್ರಮ. ಪವನ್ ಕಲ್ಯಾಣ್ ಜೊತೆ ಇರುವ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ರಾಮ್ಚರಣ್ ತೇಜ ತಮ್ಮ ಚಿಕ್ಕಪ್ಪನಿಗೆ ಶುಭ ಕೋರಿದ್ದಾರೆ.
ಹೌದು ಇಂದು ಪವನ್ ಕಲ್ಯಾಣ್ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆಂಧ್ರ, ತೆಲಂಗಾಣ ಮಾತ್ರವಲ್ಲದೇ ಕರ್ನಾಟಕದಲ್ಲಿ ಕೂಡಾ ಪವನ್ ಕಲ್ಯಾಣ್ಗೆ ಅಭಿಮಾನಿಗಳಿದ್ದಾರೆ. ಮೂರೂ ರಾಜ್ಯಗಳಲ್ಲಿ ಅನ್ನದಾನ, ರಕ್ತದಾನ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಪವನ್ ಕಲ್ಯಾಣ್ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ವಿಶ್ ಮಾಡಿದ್ದಾರೆ. ರಾಮ್ಚರಣ್ ತೇಜ ಕೂಡಾ ತನ್ನ ಚಿಕ್ಕಪ್ಪನ ಹುಟ್ಟುಹಬ್ಬಕ್ಕೆ ತಮ್ಮಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿ ಶುಭ ಕೋರಿದ್ದಾರೆ. 'ಪ್ರೀತಿಯ ಕಲ್ಯಾಣ್ ಚಿಕ್ಕಪ್ಪನಿಗೆ ಹುಟ್ಟುಹಬ್ಬದ ಶುಭಾಶಯಗಳು, ಸ್ನೇಹಿತನಾಗಿ, ಮಾರ್ಗದರ್ಶಿಯಾಗಿ ಸದಾ ನನ್ನೊಂದಿಗೆ ಇರುವುದಕ್ಕೆ ನಿಮಗೆ ಧನ್ಯವಾದಗಳು. ನಿನ್ನನ್ನು ನಾನು ಬಹಳ ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಕಳೆದ ವರ್ಷ ಪವನ್ ಕಲ್ಯಾಣ್ ಬರ್ತಡೇ ಎಂದು ರಾಮ್ಚರಣ್ ಪ್ಯಾರಾ ಗ್ಲೈಡಿಂಗ್ ಮಾಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಶುಭ ಕೋರಿದ್ದರು. ಬಹಳಷ್ಟು ಇಂಟರ್ವ್ಯೂಗಳಲ್ಲಿ ಚಿಕ್ಕಪ್ಪನನ್ನು ರಾಮ್ಚರಣ್ ಎಷ್ಟು ಇಷ್ಟಪಡುತ್ತಾರೆ ಎಂಬ ವಿಷಯ ಹೇಳಿಕೊಂಡಿದ್ದಾರೆ. ರಾಮ್ಚರಣ್ ಜೊತೆಗೆ ಸಾಯಿಧರ್ಮ ತೇಜ, ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ಕಾರ್ಯಕರ್ತರು ಕೂಡಾ ಶುಭ ಕೋರಿದ್ದಾರೆ.