ಕರ್ನಾಟಕ

karnataka

ETV Bharat / sitara

'ಸೈರಾ ನರಸಿಂಹ ರೆಡ್ಡಿ' ಸಿನಿಮಾ ನೋಡಿದ ಉಪರಾಷ್ಟ್ರಪತಿ, ಚಿರು ಅಭಿನಯಕ್ಕೆ ಮೆಚ್ಚುಗೆ - ಸೈರಾ ಸಿನಿಮಾ ನೋಡಿದ ವೆಂಕಯ್ಯ ನಾಯ್ಡು

ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರ ವೀಕ್ಷಿಸಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೈರಾ ಸಿನಿಮಾ ನೋಡಿದ ವೆಂಕಯ್ಯ ನಾಯ್ಡು​

By

Published : Oct 17, 2019, 11:56 AM IST

ತೆಲುಗಿನ ಮೆಗಾಸ್ಟಾರ್​ ಜಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ರಿಲೀಸ್​ ಆಗಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುತ್ತಿದೆ. ಇದೀಗ ಈ ಚಿತ್ರವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನೋಡಿ ಮೆಚ್ಚಿಕೊಂಡಿದ್ದಾರೆ.

ಚಿತ್ರ ಬಿಡುಗಡೆಯಾದ ಮೇಲೆ ಪ್ರಮುಖ ರಾಜಕೀಯ ನಾಯಕರನ್ನು ಚಿತ್ರ ನೋಡುವಂತೆ ಆಹ್ವಾನಿಸುತ್ತಿರುವ ಮಾಜಿ ಸಂಸದ, ನಟ ಚಿರಂಜೀವಿ, ವೆಂಕಯ್ಯ ನಾಯ್ಡು ಅವರನ್ನು ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾ ನೋಡಿರುವ ನಾಯ್ಡು​ ಚಿತ್ರ ವೀಕ್ಷಣೆ ಸಂದರ್ಭದ ಫೋಟೋವನ್ನು ತಮ್ಮ ಇನ್​​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಬಳಿಕ ಮಾತನಾಡಿರುವ ಅವರು​, ಎನ್​.ಟಿ ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರ ರಾವ್​ ನಂತರ ತೆಲುಗಿನ ಅದ್ಭುತ ನಟ ಜಿರಂಜೀವಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಲು ಈಗಾಗಲೇ ಆಂಧ್ರ ಪ್ರದೇಶದ ಸಿಎಂ ಜಗನ್​ ಮೋಹನ್​ ರೆಡ್ಡಿ ಅವರನ್ನೂ ಚಿರು ಆಹ್ವಾನಿಸಿದ್ದಾರಂತೆ.

ಸೈರಾ ನರಸಿಂಹ ರೆಡ್ಡಿ ಅಕ್ಟೋಬರ್​ 2 ಗಾಂಧಿ ಜಯಂತಿ ದಿನ ಬಿಡುಗಡೆಯಾಗಿತ್ತು. ಸುರೇಂದರ್​ ರೆಡ್ಡಿ ಚಿತ್ರ ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್​, ಅಮಿತಾಬ್​ ಬಚ್ಚನ್​, ನಯನ​ ತಾರಾ ಸೇರಿದಂತೆ ಹಲವು ದೊಡ್ಡ ನಟರು ಚಿತ್ರದಲ್ಲಿದ್ದು, ಈಗಾಗಲೇ 200 ಕೋಟಿ ರೂ ಹಣ ಗಳಿಕೆ ಮಾಡಿದೆ.

ABOUT THE AUTHOR

...view details