ಕರ್ನಾಟಕ

karnataka

ETV Bharat / sitara

ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾದ  'ಅಮೃತಮತಿ'..! - amruthamathi selected for austria international film festival

ಸ್ಯಾಂಡಲ್‌ವುಡ್‌ ಮುದ್ದು ಚೆಲುವೆ ಹರಿಪ್ರಿಯಾ ಅಭಿನಯದ 'ಅಮೃತಮತಿ' ಸಿನಿಮಾ ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

austria international film festival
'ಅಮೃತಮತಿ' ಸಿನಿಮಾ

By

Published : Jun 25, 2020, 9:40 PM IST

ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಉಗ್ರಂ' ಬೆಡಗಿ ಹರಿಪ್ರಿಯಾ ಅಭಿನಯದ 'ಅಮೃತಮತಿ' ಚಿತ್ರ ಆಸ್ಟ್ರಿಯಾ ದೇಶದ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಆಸ್ಟ್ರಿಯಾ ಚಿತ್ರೋತ್ಸವ ಜುಲೈ 22 ರಿಂದ ಆಗಸ್ಟ್ 5 ರವರೆಗೆ ನಡೆಯಲಿದ್ದು, ವಿಶೇಷ ಅಂದ್ರೆ ಈ ಬಾರಿಯ ಆಸ್ಟ್ರಿಯಾ ಚಿತ್ರೋತ್ಸವದಲ್ಲಿ ಕೊರೊನ ಭೀತಿಯಿಂದ ಸಿನಿಮಾಗಳು ಆನ್​​​ಲೈನ್​​​ನಲ್ಲೇ ಪ್ರದರ್ಶನವಾಗಲಿವೆ. 'ಅಮೃತಮತಿ' ಚಿತ್ರ 13ನೇ ಶತಮಾನದಲ್ಲಿ ಜನ್ನ ರಚಿಸಿದ 'ಯಶೋಧರ ಚರಿತೆ' ಕಾವ್ಯವನ್ನು ಆಧರಿಸಿ ಮೂಲ ಕಥಾವಸ್ತುವನ್ನು ಮರು ವ್ಯಾಖ್ಯಾನ ಮಾಡಿ ಸಿನಿಮಾ ಮಾಡಲಾಗಿದೆ.

ಮುದ್ದು ಚೆಲುವೆ ಹರಿಪ್ರಿಯಾ

ಅಮೃತಮತಿ ಪಾತ್ರದಲ್ಲಿ ಬ್ಯೂಟಿ ಕ್ವೀನ್ ಹರಿಪ್ರಿಯಾ ಅಭಿನಯಿಸಿದ್ದು, ಯಶೋಧರನ ಪಾತ್ರದಲ್ಲಿ ಬಹುಭಾಷಾ ನಾಟ ಕನ್ನಡಿಗ ಕಿಶೋರ್ ಬಣ್ಣ ಹಚ್ಚಿದ್ದಾರೆ. ಹಾಗೂ ತಾರಾಗಣದಲ್ಲಿ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ತಿಲಕ್, ಸುಪ್ರಿಯಾ ಹಾಗೂ ಮೋಹನ್ ಸೇರಿದಂತೆ ಸಾಕಷ್ಟು ರಂಗಭೂಮಿ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಕಿಶೋರ್ ಜೊತೆ ಹರಿಪ್ರಿಯಾ

ಚಿತ್ರವನ್ನು ಇಂಚರ ಪುಟ್ಟಣ್ಣ ಪ್ರೊಡಕ್ಷನ್​​​ನಲ್ಲಿ ಪುಟ್ಟಣ್ಣ ನಿರ್ಮಸಿದ್ದು, ಈಗಾಗಲೇ ಚಿತ್ರ ರಿಲೀಸ್​​​ಗೆ ರೆಡಿಯಾಗಿದ್ದು ಲಾಕ್​​ಡೌನ್ ನಂತರ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿ ಕೊಂಡಿದೆ.

ABOUT THE AUTHOR

...view details