ಕರ್ನಾಟಕ

karnataka

ETV Bharat / sitara

ಶುರುವಾಗಿದೆ ಬಯೋಪಿಕ್ಸ್​ ಪರ್ವ... ಮುಖ್ಯಮಂತ್ರಿ ಚಿತ್ರಕ್ಕೆ ಆರ್​ಜಿವಿ ಆ್ಯಕ್ಷನ್ ಕಟ್ - ಮಚ್ಚು

'ಲಕ್ಷ್ಮಿ ಎನ್​ಟಿಆರ್​' ನಂತ್ರ ನಿರ್ದೇಶಕ ರಾಮ್​ ಗೋಪಾಲ್ ವರ್ಮಾ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಬಯೋಪಿಕ್​ ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ.

ಆರ್​ಜಿವಿ

By

Published : Apr 18, 2019, 9:21 PM IST

ಭಾರತೀಯ ಚಿತ್ರರಂಗದಲ್ಲಿ ಈಗ ಬಯೋಪಿಕ್ ಪರ್ವ ಪ್ರಾರಂಭವಾಗಿದೆ. ಸಿಲ್ವರ್​ ಸ್ಕ್ರೀನ್​ ಮೇಲೆ ಲಾಂಗು, ಮಚ್ಚುಗಳ ಸೌಂಡ್​ ಕಡಿಮೆಯಾದಂತಿದೆ. ಮರ ಸುತ್ತಿ ಪ್ರೀತಿಸುವಂತ ಲವ್​ ಸ್ಟೋರಿ ಸಿನಿಮಾಗಳ ಮೇಲಿನ ಒಲವು ಸಹ ಚಿತ್ರ ನಿರ್ಮಾಪಕರಲ್ಲಿ ಇಳಿಮುಖವಾದಂತಿದೆ.

ಹೌದು, ಈಗ ಬಯೋಪಿಕ್​ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ಕ್ರಿಕೆಟರ್​​, ರಾಜಕಾರಣ ಹಾಗೂ ಸಿನಿಮಾ ತಾರೆಯರ 'ವ್ಯಕ್ತಿ ಚಿತ್ರ' ಸಿನಿಮಾ ರೂಪದಲ್ಲಿ ಬರುತ್ತಿವೆ. ಇವುಗಳು ಪ್ರೇಕ್ಷಕ ವರ್ಗಗಳ ಆಕರ್ಷಿಸುತ್ತಿವೆ. ಈಗಾಗಲೇ ಎಂ.ಎಸ್ ಧೋನಿ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ಮೇರು ನಟ ಜೆಮಿನಿ ಗಣೇಶ್​, ಟಾಲಿವುಡ್​ ದಿಗ್ಗಜ ಹಾಗೂ ಮಾಜಿ ಸಿಎಂ ಎನ್​ಟಿಆರ್​ ಬಯೋಪಿಕ್​ಗಳು ತೆರೆಕಂಡು, ಜಯ ಸಾಧಿಸಿವೆ. ಒಂದಿಷ್ಟು ಬಯೋಪಿಕ್​ಗಳು ಬಿಡುಗಡೆ ಎದುರು ನೋಡುತ್ತಿವೆ. ಇದೀಗ ಇವುಗಳ ಸಾಲಿಗೆ ಮತ್ತೊಂದು ವ್ಯಕ್ತಿಚಿತ್ರ ಸೇರ್ಪಡೆಯಾಗಿದೆ.

ಕಾಂಟ್ರವರ್ಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್​ ಕುರಿತಾದ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. 'ಟೈಗರ್​ ಕೆಸಿಆರ್' ಟೈಟಲ್​ನ ಈ ಚಿತ್ರಕ್ಕೆ 'ಅಗ್ರೆಸಿವ್ ಗಾಂಧಿ' ಎನ್ನುವ ಟ್ಯಾಗ್​ಲೈನ್​ ಫಿಕ್ಸ್ ಮಾಡಿದ್ದಾರೆ ವರ್ಮಾ. ತಮ್ಮ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.

ಮುಖ್ಯಮಂತ್ರಿ ಚಿತ್ರಕ್ಕೆ ಆರ್​ಜಿವಿ ಆ್ಯಕ್ಷನ್ ಕಟ್

ಇನ್ನು ವರ್ಮಾ ಕೆಲ ದಿನಗಳ ಹಿಂದೆಯಷ್ಟೆ 'ಲಕ್ಷ್ಮಿ ಎನ್​ಟಿಆರ್​'ಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಬಲಿಗರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಸಿಕ್ಕಾಪಟ್ಟೆ ಕಾಂಟ್ರವರ್ಸಿ ಮೈಮೇಲೆ ಎಳೆದುಕೊಂಡಿದ್ದ ಈ ಚಿತ್ರ ಮೇಲೆ ಬಂತು.

ಇನ್ನು ತೆಲಂಗಾಣ ಪ್ರತ್ಯೇಕ ರಾಜ್ಯದ ಸ್ಥಾಪನೆಯಲ್ಲಿ ಕೆಸಿಆರ್ ಹೋರಾಟ ಮತ್ತು ಸಾಧನೆಗಳನ್ನು ತೆರೆ ಮೇಲೆ ತರಲು ಆರ್​ಜಿವಿ ಕೈಹಾಕಿದ್ದಾರೆ.

ABOUT THE AUTHOR

...view details