ಕರ್ನಾಟಕ

karnataka

ETV Bharat / sitara

ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ಬಿಕಿನಿಯಲ್ಲಿ ಕುಳಿತ ರಕುಲ್​​​​​​ - ಮಾಲ್ಡೀವ್ಸ್​​​ನಲ್ಲಿ ರಕುಲ್​ ಪ್ರೀತ್​​​ ಸಿಂಗ್​​

ಇತ್ತೀಚೆಗೆ ತಮ್ಮ ಫ್ಯಾಮಿಲಿಯೊಂದಿದೆ ಮಾಲ್ಡೀವ್ಸ್​​​ ಕಡೆ ಪಯಣ ಬೆಳೆಸಿರುವ ನಟಿ ರಕುಲ್​ ಪ್ರೀತ್​​ ಸಿಂಗ್, ಕಡಲ ತೀರದಲ್ಲಿ ಸಖತ್​ ಮೋಜು ಮಸ್ತಿ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ.

Rakul Preet Singh's Holiday Glow Is Brighter Than The Maldives Sun
ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ಬಿಕಿನಿಯಲ್ಲಿ ಕುಳಿತ ರಕುಲ್​​​​​​

By

Published : Nov 21, 2020, 7:02 PM IST

ಲಾಕ್​​ಡೌನ್​​ನಲ್ಲಿ ಮನೆಯಲ್ಲಿ ಕೂತು ಕೂತು ಬೇಸರಗೊಂಡಿರುವ ನಟ-ನಟಿಯರು ಇದೀಗ ಪ್ರವಾಸಕ್ಕೆಂದು ಗೋವಾ, ದುಬೈ, ಮಾಲ್ಡೀವ್ಸ್ ಕಡೆಗೆ ಪ್ರಯಾಣ ಬೆಳೆಸಿ ಎಂಜಾಯ್​ ಮಾಡ್ತಿದ್ದಾರೆ. ಇತ್ತೀಚೆಗೆ ಸ್ಯಾಂಡಲ್​ವುಡ್​​ ನಟಿ ಪ್ರಣಿತಾ ಸುಭಾಷ್​​​, ಬಾಲಿವುಡ್​​​ನ ದಿಶಾ ಪಟಾನಿ ಮಾಲ್ಡೀವ್ಸ್​​​ಗೆ ಭೇಟಿ ಕೊಟ್ಟು ಎಂಜಾಯ್​ ಮಾಡಿದ್ರು. ಇದೀಗ ರಕುಲ್​ ಪ್ರೀತ್​​ ಮಾಲ್ಡೀವ್ಸ್​​ಗೆ ಭೇಟಿ ಕೊಟ್ಟಿದ್ದಾರೆ.

ಇತ್ತೀಚೆಗೆ ತಮ್ಮ ಫ್ಯಾಮಿಲಿಯೊಂದಿದೆ ಮಾಲ್ಡೀವ್ಸ್​​​ ಕಡೆ ಪಯಣ ಬೆಳೆಸಿರುವ ನಟಿ, ಕಡಲ ತೀರದಲ್ಲಿ ಸಖತ್​ ಮೋಜು ಮಸ್ತಿ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ತಾವು ಬಿಕಿನಿಯಲ್ಲಿರುವ ಫೋಟೋಗಳನ್ನು ರಕುಲ್​​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ.

ರಕುಲ್​​ ತಮ್ಮ ಇನ್​ಸ್ಟಾಗ್ರಾಂ​​​ನಲ್ಲಿ ಬಿಕಿನಯಲ್ಲಿರುವ ಫೋಟೋ ಹಂಚಿಕೊಂಡಿದ್ದು, ನಗು ಎನ್ನುವುದು ಸಾಂಕ್ರಾಮಿಕ ಇದ್ದಂತೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ನನ್ನ ನಗುವನ್ನು ಸೆರೆ ಹಿಡಿದಿದ್ದು ನಮ್ಮ ಅಪ್ಪ ಎಂದು ಬರೆದುಕೊಂಡಿದ್ದಾರೆ.

ರಕುಲ್​​​​​​ ಪ್ರೀತ್​​

ಮತ್ತೊಂದು ಯೋಗಾಸನ ಮಾಡುವ ಫೋಟೋವನ್ನು ಹಂಚಿಕೊಂಡಿರುವ ಬಾಲಿವುಡ್​​ ಬೆಡಗಿ, ವಿಟಮಿನ್​​ ಡಿಯನ್ನು ಸಮುದ್ರದಿಂದ ಪಡೆಯುತ್ತಿದ್ದೇನೆ ಎಂದಿದ್ದಾರೆ.

ರಕುಲ್​​​​​​ ಪ್ರೀತ್​​

ಈ ಹಿಂದೆ ಬಿಕಿನಿಯಲ್ಲಿನ ಒಂದು ಫೋಟೋ ಶೇರ್​ ಮಾಡಿದ್ದ ರಕುಲ್​​, ಸಮುದ್ರದ ಸುಗಂಧ, ಆಕಾಶದ ಅನುಭವ ಪಡೆದರೆ ನಿಮ್ಮ ಆತ್ಮ ಹಾರಾಡುತ್ತದೆ ಎಂದು ಬರೆದಿದ್ದರು.

ರಕುಲ್​​​​​​ ಪ್ರೀತ್​​

ಒಟ್ಟಾರೆ ಸಿನಿಮಾ ತಾರೆಯರು ಮನದ ಬೇಸರವನ್ನು ಕಳೆಯಲು ಮತ್ತು ಒಂದಷ್ಟು ದಿನ ಹೊಸ ಜಾಗವನ್ನು ಎಂಜಾಯ್​ ಮಾಡಲು ತಮ್ಮ ಫ್ಯಾಮಿಲಿ ಹಾಗೂ ಪ್ರೀತಿ ಪಾತ್ರರೊಂದಿಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂಜಾಯ್​ ಮಾಡ್ತಿದ್ದಾರೆ.

ABOUT THE AUTHOR

...view details