ಕರ್ನಾಟಕ

karnataka

ETV Bharat / sitara

ಬರ್ತಡೇ ಸಂಭ್ರಮ... ಬಿಂದಾಸ್​ ಆಗಿ ಹುಲಿ ಹೆಜ್ಜೆ ಹಾಕಿದ್ರು ರಕ್ಷಿತ್​ ಶೆಟ್ಟಿ - undefined

ಸಖತ್ ಬ್ಯುಸಿಯಾಗಿರುವ ರಕ್ಷಿತ್​ ಶೆಟ್ಟಿ ಬರ್ತಡೇ ಆಚರಿಸಿಕೊಂಡರು. ಶ್ರೀಮನ್ನಾರಾಣ ಚಿತ್ರತಂಡ ಹಾಗೂ ಚಾರ್ಲಿ 777 ಟೀಂ ರಕ್ಷಿತ್​ ಶೆಟ್ಟಿ ಜೊತೆ ಸೆಲೆಬ್ರೇಟ್ ಮಾಡಿ ಫುಲ್ ಸ್ಟೆಪ್ ಹಾಕಿದ್ದಾರೆ.

ರಕ್ಷಿತ್​ ಶೆಟ್ಟಿ

By

Published : Jun 7, 2019, 5:13 AM IST

ಸಿಂಪಲ್ಲಾಗಿ ಲವ್ ಮಾಡಿ ಸ್ಯಾಂಡಲ್​ವುಡ್​ಗೆ ಎಂಟ್ರಿ. ಕಿರಿಕ್ ಪಾರ್ಟಿ ಮಾಡ್ಕೋಂಡೆ ಶೈನ್ ಆದ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕಳೆದ ವರ್ಷ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿಕೊಂಡಿದ್ದ ಕಿರಿಕ್ ಹುಡ್ಗ ಈ ವರ್ಷ ಯಾರ ಕೈಗೂ ಸಿಗದೆ ಬಿಂದಾಸ್​ ಡಾನ್ಸ್​ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಕೇಕ್ ಕಟ್ ಮಾಡಿ ಪುಲ್ ಸ್ಟೆಪ್ ಹಾಕಿದ ರಕ್ಷಿತ್​ ಶೆಟ್ಟಿ

ಅವನೇ ಶ್ರೀಮನ್ನಾರಾಣ ಚಿತ್ರದಲ್ಲಿ ಸಖತ್ ಬ್ಯುಸಿಯಾಗಿರುವ ಈ ಶೆಟ್ರು, ಬರ್ತಡೇನ‌ ಅವನೇ ಶ್ರೀಮನ್ನಾರಾಣ ಚಿತ್ರತಂಡ ಹಾಗೂ ಚಾರ್ಲಿ 777 ಟೀಂನವರು ರಕ್ಷಿತ್​ ಕೈಯಿಂದ ಕೇಕ್ ಕಟ್ ಮಾಡಿಸಿದ್ದಾರೆ. ಬಳಿಕ ಚಿತ್ರದ ಟ್ಯೂನ್​ಗೆ ಈ ನಾರಾಯಣ ಸಖತ್ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಹುಲಿ ಕುಣಿತದ ಸೌಂಡ್​ಗೂ ಹೆಜ್ಜೆ ಹಾಕಿ ಗಮನ ಸೆಳೆದ್ರು.

ಕಿರಿಕ್ ಪಾರ್ಟಿ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಅಭಿನಯದ ಯಾವುದೇ ಚಿತ್ರ ರಿಲೀಸ್ ಆಗಲಿಲ್ಲ. ಸದ್ಯ ಬಿಡುಗಡೆಗೆ ರೆಡಿಯಾಗಿರುವ ಅವನೇ ಶ್ರೀಮನ್ನಾರಾಣ ಚಿತ್ರವನ್ನು ಕಣ್ತುಂಬಿಕೊಳ್ಳಲು ರಕ್ಷಿತ್​ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details