ಎರಡು ವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಇಬ್ಬರ ನಿಶ್ಚಿತಾರ್ಥ ರದ್ದಾದ ನಂತರ ರಶ್ಮಿಕಾ ಮಂದಣ್ಣ ಬಗ್ಗೆ ರಕ್ಷಿತ್ ಶೆಟ್ಟಿ ಎಲ್ಲೂ ಮಾತಾಡಿರಲಿಲ್ಲ. ಈಗ ಮೊದಲ ಬಾರಿಗೆ ರಶ್ಮಿಕಾ ಬಗ್ಗೆ ರಕ್ಷಿತ್ ಮಾತನಾಡಿರುವುದಷ್ಟೇ ಅಲ್ಲ, ಅವರಿಗೆ ಮನ ತುಂಬಿ ಹಾರೈಸಿದ್ದಾರೆ. 'ನಿನ್ನ ಎಲ್ಲಾ ಕನಸುಗಳು ನನಸಾಗಲಿ, ಇನ್ನಷ್ಟು ಎತ್ತರಕ್ಕೆ ಬೆಳಿ ' ಎಂದು ಶುಭ ಕೋರಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾದ 'ಬೆಳಗೆದ್ದು ಯಾರ ಮುಖವ ನಾನು ನೋಡಿದೆ ...' ಹಾಡು ಇದೀಗ ಯೂಟ್ಯೂಬ್‍ನಲ್ಲಿ ನೂರು ಮಿಲಿಯನ್ ವ್ಯೂವ್ಸ್ ದಾಟಿದೆ. ಈ ಹಿನ್ನೆಲೆಯಲ್ಲಿ ರಶ್ಮಿಕಾ, ಸೋಷಿಯಲ್ ಮೀಡಿಯಾದಲ್ಲಿ "ಇದು ನನ್ನ ಮೊದಲ ಹಾಡು. ನೂರು ಮಿಲಿಯನ್ ದಾಟಿರುವುದು ಹೆಮ್ಮೆಯ ವಿಷಯ. ಅದೊಂದು ಅದ್ಭುತ ಪ್ರಯಾಣ" ಎಂದು ನೆನಪಿಸಿಕೊಂಡಿದ್ದರು. ಅಷ್ಟೇ ಅಲ್ಲ, ರಕ್ಷಿತ್ ಅವರಿಗೂ ಈ ಪೋಸ್ಟ್ ಟ್ಯಾಗ್ ಮಾಡಿದ್ದರು. ಎರಡು ವರ್ಷಗಳಿಂದ ಇವರಿಬ್ಬರೂ ಯಾವ ವಿಷಯದಲ್ಲೂ ಪರಸ್ಪರ ಟ್ಯಾಗ್ ಮಾಡಿಕೊಂಡಿರಲಿಲ್ಲ. ಇದೀಗ ರಶ್ಮಿಕಾ ಎರಡು ವರ್ಷಗಳ ನಂತರ ಮೊದಲ ಬಾರಿಗೆ, ತಮ್ಮ ಸಂದೇಶವೊಂದಕ್ಕೆ ರಕ್ಷಿತ್ ಅವರನ್ನು ಟ್ಯಾಗ್ ಮಾಡಿದ್ದಾರೆ. ರಕ್ಷಿತ್ ಕೂಡಾ ಇದಕ್ಕೆ ಪ್ರತಿಕ್ರಿಯಿಸಿದ್ದು "ಇನ್ನಷ್ಟು ಎತ್ತರಕ್ಕೆ ಬೆಳಿ ಹುಡುಗಿ, ನಿನ್ನ ಎಲ್ಲಾ ಕನಸುಗಳು ನನಸಾಗಲಿ" ಎಂದು ಹಾರೈಸಿದ್ದಾರೆ. ರಕ್ಷಿತ್ ಅವರ ರೀಟ್ವೀಟ್ಗೆ ಮತ್ತೆ ಪ್ರತಿಕ್ರಿಯಿಸಿರುವ ರಶ್ಮಿಕಾ ಹಗ್ಗಿಂಗ್ ಹಾಗೂ ಬ್ಷಷ್ ಎಮೋಜಿ ಬಳಸಿ ರೀಟ್ವೀಟ್ ಮಾಡಿದ್ದಾರೆ.