ಇಂದು ಸ್ಯಾಂಡಲ್ವುಡ್ ಬೆಡಗಿ ಶಾನ್ವಿ ಶ್ರೀವಾಸ್ತವ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 28ನೇ ವಸಂತಕ್ಕೆ ಕಾಲಿಟ್ಟಿರುವ ನಟಿಗೆ ಅಭಿಮಾನಿಗಳಿಂದ, ಸಿನಿ ಬಳಗದಿಂದ ಶುಭಾಶಯಗಳು ಹರಿದು ಬರುತ್ತಿವೆ. ಹಾಗೂ ನಟ ರಕ್ಷಿತ್ ಶೆಟ್ಟಿ ಕೂಡ ಶ್ರೀಮನ್ನಾರಾಯಣನ ಸುಂದರಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
ಶಾನ್ವಿ ಶ್ರೀವಾಸ್ತವ್ ಮತ್ತು ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶಾನ್ವಿ ಫೋಟೋ ಹಾಕಿ ವಿಶ್ ಮಾಡಿರುವ ನಟ ರಕ್ಷಿತ್ ಶೆಟ್ಟಿ, ಪ್ರೀತಿಯ ಶಾನ್ವಿ ಶ್ರೀವಾಸ್ತವ್ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮಲ್ಲಿ ಯಾವಾಗಲು ಕನಸುಗಳು ತುಂಬಿರಲಿ, ನೀವು ಅದ್ಭುತ ವ್ಯಕ್ತಿ ಎಂದು ಬರೆದಿದ್ದಾರೆ.
ರಕ್ಷಿತ್ ಶೆಟ್ಟಿ ನಟಿಗೆ ವಿಶ್ ಮಾಡಿದ್ದನ್ನು ನೋಡಿದ ಅಭಿಮಾನಿಗಳು ತರಹೇವಾರಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ, ನೀವಿಬ್ಬರು ಮದುವೆಯಾಗಿ ಎನ್ನುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಬರ್ತ್ ಡೇ ವಿಶ್ಗೆ ಶಾನ್ವಿ ಶ್ರೀವಸ್ತಾವ್ ಧನ್ಯವಾದ ತಿಳಿಸಿದ್ದಾರೆ.
ಶಾನ್ವಿ ಶ್ರೀವಾಸ್ತವ್ ಮತ್ತು ರಕ್ಷಿತ್ ಶೆಟ್ಟಿ ಶಾನ್ವಿ ತೆಲುಗು ಚಿತ್ರರಂಗದಿಂದ ಚಂದನವನಕ್ಕೆ ಬಂದಿದ್ದು, ಇಲ್ಲಿಯೇ ಒಳ್ಳೆ ಹೆಸರು ಮಾಡುತ್ತಿದ್ದಾರೆ. ಇವರು ಮೂಲತಃ ಉತ್ತರಪ್ರದೇಶದವರಾಗಿದ್ದು, ಇತ್ತೀಚೆಗೆ ರಕ್ಷಿತ್ ಶೆಟ್ಟಿ ಜೊತೆ ಅವನೇ ಶ್ರೀಮನ್ನಾರಾಯಣ ಸಿನಿಮಾ ಮಾಡಿದ್ರು. ಅಲ್ಲದೆ ತಾರಕ್, ಮಫ್ತಿ , ಮಾಸ್ಟರ್ ಪೀಸ್ ಚಿತ್ರಗಳಲ್ಲಿ ಕನ್ನಡದ ಖ್ಯಾತ ನಟರಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.