ಈ ವರ್ಷದ ಕೊನೆಯಲ್ಲಿ ತೆರೆ ಕಂಡ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು ಎರಡು ವರ್ಷಗಳಿಂದ ರಕ್ಷಿತ್ ಶೆಟ್ಟಿ ಈ ಸಿನಿಮಾಗೆ ಹಾಕಿದ್ದ ಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ ಎನ್ನಬಹುದು.
ಪ್ರೇಕ್ಷಕರ ಜೊತೆ ಕುಳಿತು 'ಅವನೇ ಶ್ರೀಮನ್ನಾರಾಯಣ' ವೀಕ್ಷಿಸಿದ ರಕ್ಷಿತ್ ಶೆಟ್ಟಿ
ರಾಜ್ಯಾದ್ಯಂತ ಸುಮಾರು 350ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ 'ಅವನೇ ಶ್ರೀಮನ್ನಾರಾಯಣ' ಬಿಡುಗಡೆಯಾಗಿದೆ. ಎಲ್ಲೆಲ್ಲೂ ನಾರಾಯಣನ ಜಪ ಶುರುವಾಗಿದೆ. ಪೊಲೀಸ್ ಅವತಾರದಲ್ಲಿ ರಕ್ಷಿತ್ ಶೆಟ್ಟಿ ತರ್ಲೆ, ತಮಾಷೆ ಮಾಡುತ್ತಾ ಸಿನಿಪ್ರಿಯರನ್ನು ರಂಜಿಸುವಲ್ಲಿ ಸಕ್ಸಸ್ ಆಗಿದ್ದಾರೆ.
ರಾಜ್ಯಾದ್ಯಂತ ಸುಮಾರು 350ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ 'ಅವನೇ ಶ್ರೀಮನ್ನಾರಾಯಣ' ಬಿಡುಗಡೆಯಾಗಿದೆ. ಎಲ್ಲೆಲ್ಲೂ ನಾರಾಯಣನ ಜಪ ಶುರುವಾಗಿದೆ. ಪೊಲೀಸ್ ಅವತಾರದಲ್ಲಿ ರಕ್ಷಿತ್ ಶೆಟ್ಟಿ ತರ್ಲೆ, ತಮಾಷೆ ಮಾಡುತ್ತಾ ಸಿನಿಪ್ರಿಯರನ್ನು ರಂಜಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಇನ್ನು 70-80 ದಶಕದ ಪತ್ರಕರ್ತೆಯಾಗಿ ಶಾನ್ವಿ ಶ್ರೀವಾತ್ಸವ್ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಇನ್ನು ತುಕಾರಾಮ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ಜಯರಾಮ್ ಪಾತ್ರಧಾರಿ ಬಾಲಾಜಿ ಮನೋಹರ್ ಅಬ್ಬರಿಸಿದ್ದಾರೆ. ಸಚಿನ್ ರವಿ ನಿರ್ದೇಶನದ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನ್ ಹಾಗೂ ಪ್ರಕಾಶ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಫ್ಯಾಂಟಸಿ ಶೈಲಿಯಲ್ಲಿ ಮೂಡಿ ಬಂದಿದೆ. ಕೆ.ಜಿ. ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್, ಖಳನಟರಾದ ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್, ನಿರ್ದೇಶಕ ಸಚಿನ್ ರವಿ ಹಾಗೂ ಚಿತ್ರತಂಡದ ಇತರ ಸದಸ್ಯರು ಪ್ರೇಕ್ಷಕರೊಂದಿಗೆ ಕುಳಿತು ಮೊದಲ ಶೋ ವೀಕ್ಷಿಸಿದರು.