ಕರ್ನಾಟಕ

karnataka

ETV Bharat / sitara

100 ಕೋಟಿ ಕ್ಲಬ್​​ನತ್ತ ನಾರಾಯಣ... ಪೈರಸಿ ತಡೆಯಲು ಚಿತ್ರತಂಡ ಹೀಗೆ ಮಾಡಿದೆಯಂತೆ

ಈಗಾಗಲೇ ಭರ್ಜರಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅವನೇ ಶ್ರೀಮನ್ನಾರಾಯಣ ಸಿನಿಮಾ 100 ಕೋಟಿ ಕ್ಲಬ್ ಸೇರುವತ್ತ ಯಶಸ್ವಿ ದಾಪುಗಾಲು ಇಡುತ್ತಿದೆ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.

rakshit shetty speak about  avanne srimannarayan
ರಕ್ಷಿತ್​ ಶೆಟ್ಟಿ

By

Published : Jan 5, 2020, 1:30 PM IST

ಈಗಾಗಲೇ ಭರ್ಜರಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅವನೇ ಶ್ರೀಮನ್ನಾರಾಯಣ ಸಿನಿಮಾ 100 ಕೋಟಿ ಕ್ಲಬ್ ಸೇರುವತ್ತ ಯಶಸ್ವಿ ದಾಪುಗಾಲು ಇಡುತ್ತಿದೆ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಿನಿಮಾದ ಯಶಸ್ವಿನ ಬಗ್ಗೆ ಮಾತನಾಡಿದ ಅವರು, ಯಾವುದೇ ಒಂದು ಸಿನಿಮಾ ಗೆಲುವು ಸಾಧಿಸಲು ಉತ್ತರ ಕರ್ನಾಟಕ ಭಾಗ ಬೆನ್ನೆಲುಬು. ಅದೇ ರೀತಿ ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನು ಗೆಲ್ಲಿಸಿದ್ದಾರೆ. ಅಲ್ಲದೇ ಚಿತ್ರದ ಚಿತ್ರೀಕರಣವನ್ನು ಉತ್ತರ ಕರ್ನಾಟಕ ಭಾಗದಲ್ಲೂ ಮಾಡಲಾಗಿದ್ದು, ಸಿನಿಮಾ 10 ದಿನದಲ್ಲಿ ಹೊಸ ದಾಖಲೆ ಸೃಷ್ಟಿ ಮಾಡುವಲ್ಲಿ ನಡೆಯುತ್ತಿದೆ. ತೆಲುಗು, ತಮಿಳು, ಮಲಯಾಳಂನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಜ.17 ರಂದು ಹಿಂದಿಯಲ್ಲಿ ಬಿಡುಗಡೆಯಾಗಲಿದೆ ಎಂದರು.

ಅವನೇ ಶ್ರೀಮನ್ನಾರಾಯಣನ ಸಿನಿಮಾ ಬಗ್ಗೆ ಸುದ್ದಿಗೋಷ್ಠಿ

ಚಿತ್ರದ ಖಳನಟ ಬಾಲಾಜಿ ಮಾತನಾಡಿ ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನು ರಾಜ್ಯ, ದೇಶ ಅಷ್ಟೇ ಅಲ್ಲದೇ ಹೊರ ದೇಶದಲ್ಲೂ ಜನರು ವಿಕ್ಷಣೆ ಮಾಡುತ್ತಿದ್ದು, ಕೆನಡಾದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದಕ್ಕೆ ಮೂಲ ಕಾರಣ ಚಿತ್ರದ ಚಿತ್ರಕಥೆ. ಇನ್ನೂ ಹುಬ್ಬಳ್ಳಿ ಅಥವಾ ಉತ್ತರ ಕರ್ನಾಟಕ ಭಾಗದಲ್ಲಿ ಯಾವ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತದೆಯೋ ಆ ಸಿನಿಮಾ ರೆಕಾರ್ಡ್ ಸಿನಿಮಾ ಆಗುವುದು ಎಂಬ ನಂಬಿಕೆ ಇದೆ. ಮತ್ತೊಮ್ಮೆ ಸಾಬೀತಾಗಿದೆ ಎಂದರು.

ಪೈರಸಿ ವಿರುದ್ಧ ಹೋರಾಟ: ಸಿನಿಮಾಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇವೆ. ಹಾಗಾಗಿ ಪೈರಸಿ ವಿರುದ್ಧ ದೊಡ್ಡ ಮಟ್ಟದಲ್ಲೇ ಹೋರಾಟ ಮಾಡುತ್ತಿದ್ದೇವೆ. ಆನ್​ಲೈನ್​​ನಲ್ಲಿ ಅಪ್​ಲೋಡ್​ ಆಗುವ ಪೈರಸಿ ಕಾಪಿಗಳನ್ನು ಡಿಲಿಟ್​ ಮಾಡಲು ಒಂದು ಐಟಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಆದರೆ, ಎಷ್ಟೇ ಸಾರಿ ಡಿಲಿಟ್​ ಮಾಡಿದರೂ, ಮತ್ತೆ ಅಪ್​ಲೋಡ್​ ಆಗುತ್ತಲೇ ಇದೆ ಎಂದು ಅವರು ತಿಳಿಸಿದರು.

ಇನ್ನು ಪತ್ರಿಕಾಗೋಷ್ಠಿಯಲ್ಲಿ ನಟ ಪ್ರಮೋದ್​​ ಶೆಟ್ಟಿ, ನಿರ್ದೇಶಕ ಸಚಿನ್​​ ಸೇರಿದಂತೆ ಹಲವರು ಉಪಸ್ಥಿತರಿದ್ದರು

ABOUT THE AUTHOR

...view details