ಕಳೆದ ತಿಂಗಳು 'ರಾಮಾರ್ಜುನ' ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ನಾರ್ಮಲ್ ಆಗಿದ್ದ ರಕ್ಷಿತ್ ಶೆಟ್ಟಿ, ಇದೀಗ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ. ರಕ್ಷಿತ್ ಅಭಿನಯದ ಹೊಸ ಚಿತ್ರ 'ಸಪ್ತ ಸಾಗರದಾಚೆ ಎಲ್ಲೋ' ಇದಕ್ಕೆ ಕಾರಣ. ಇತ್ತೀಚೆಗಷ್ಟೇ ಸೆಟ್ಟೇರಿದ ಈ ಚಿತ್ರದ ಮುಹೂರ್ತದಲ್ಲಿ ರಕ್ಷಿತ್ ತಾವು ಸ್ಲಿಮ್ ಆಗಿದ್ದು ಏಕೆ ಎಂದು ಹೇಳಿಕೊಂಡರು.
'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ರಕ್ಷಿತ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕಥೆ ಎರಡು ವಿಭಿನ್ನ ಕಾಲಘಟ್ಟದಲ್ಲಿ ನಡೆಯಲಿದೆಯಂತೆ ಮೊದಲಿಗೆ, 2010ರಲ್ಲಿ ಪ್ರಾರಂಭವಾಗುವ ಕಥೆ ಇಂಟರ್ವೆಲ್ ಹೊತ್ತಿಗೆ ಮುಗಿಯುತ್ತದೆ. ಆ ನಂತರ ಮತ್ತೆ 2020ರಲ್ಲಿ ಕಥೆ ಮುಂದುವರೆಯಲಿದೆ. ಎರಡು ಕಾಲಘಟ್ಟವಾದ್ದರಿಂದ, ರಕ್ಷಿತ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಭಾಗದಲ್ಲಿ 10 ಕೆಜಿ ಇಳಿಸಿಕೊಂಡರೆ, ಎರಡನೆಯ ಕಾಲಘಟ್ಟದಲ್ಲಿ ಮತ್ತೆ 10 ಕೆಜಿ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರು 10 ಕಿಲೋ ಹೆಚ್ಚು ತೂಕ ಇಳಿಸಿಕೊಂಡಿದ್ದರಂತೆ. ಗಡ್ಡ ತೆಗೆದಾಗ ಮುಖ ಬಹಳ ಚಿಕ್ಕದಾಗಿ ಕಂಡಿತಂತೆ. ಹಾಗಾಗಿ ಸ್ವಲ್ಪ ತೂಕ ಹೆಚ್ಚಿಸಿಕೊಂಡಿದ್ದಾರೆ. ಮೊದಲ ಭಾಗದ ಚಿತ್ರೀಕರಣದಲ್ಲಿ ಅವರು ತೊಡಗಿಸಿಕೊಳ್ಳಲಿದ್ದಾರೆ. ಆ ನಂತರ ಒಂದು ತಿಂಗಳ ಗ್ಯಾಪ್ನಲ್ಲಿ ಅವರು ಮತ್ತೆ ತೂಕ ಹೆಚ್ಚಿಸಿಕೊಂಡು ಎರಡನೇ ಶೇಡ್ಗೆ ಸಿದ್ಧವಾಗಲಿದ್ದಾರೆ. ಜೊತೆಗೆ ಅವರ ಗೆಟಪ್ ಕೂಡಾ ಬದಲಾಗಲಿದೆಯಂತೆ.