ಲಾಕ್‍ಡೌನ್ ಮುಗಿದರೂ ಚಿತ್ರೀಕರಣ ಮಾಡಲು ಎಲ್ಲರೂ ಹೆದರುತ್ತಿದ್ದ ಸಂದರ್ಭದಲ್ಲಿ ಮೊದಲಿಗೆ ಧೈರ್ಯವಾಗಿ ಹೈದರಾಬಾದ್‍ಗೆ ಹೋಗಿ ಚಿತ್ರೀಕರಣ ಮಾಡಿಕೊಂಡು ಬಂದವರು ' ಫ್ಯಾಂಟಮ್' ಚಿತ್ರತಂಡ. ಆ ನಂತರ ಬೇರೆಬೇರೆ ಚಿತ್ರತಂಡಗಳು ಕೂಡಾ ಕರ್ನಾಟಕದ ಹೊರಗೆ ಹೋಗಿ ತಮ್ಮ ಸಿನಿಮಾಗಳ ಚಿತ್ರೀಕರಣ ಮಾಡಲು ಆರಂಭಿಸಿದ್ದಾರೆ. ನಿನ್ನೆಯಷ್ಟೇ ಹೈದರಾಬಾದ್ನಲ್ಲಿ ಕೆಜಿಎಫ್ ಸೀಕ್ವೆಲ್ ಕ್ಲೈಮಾಕ್ಸ್ ಚಿತ್ರೀಕರಣ ಅರಂಭವಾಗಿದೆ.
ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ...ರಾಜಸ್ಥಾನದಲ್ಲಿ ನಿರ್ದೇಶಕ ಪ್ರೇಮ್ - Ek love ya shooting in Jaismaler
ಕೆಲವು ದಿನಗಳ ಹಿಂದೆ ಕಾಶ್ಮೀರದಲ್ಲಿ 'ಏಕ್ ಲವ್ ಯಾ' ಚಿತ್ರೀಕರಣ ಮುಗಿಸಿದ್ದ ಪ್ರೇಮ್ ಈಗ ರಾಜಸ್ಥಾನದ ಜೈಸ್ಮಲೇರ್ನಲ್ಲಿ 'ಏಕ್ ಲವ್ ಯಾ 'ಚಿತ್ರೀಕರಣ ಮಾಡುತ್ತಿದ್ದಾರೆ. '777 ಚಾರ್ಲಿ ' ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಕೂಡಾ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದು ಇನ್ನೂ ಕೆಲವು ದಿನಗಳ ಕಾಲ ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರತಂಡ , ಕಾಶ್ಮೀರಕ್ಕೆ ಹೋಗಿ ಒಂದು ಹಾಡಿನ ಚಿತ್ರೀಕರಣ ಮಾಡಿಕೊಂಡು ಬಂದಿತ್ತು. ಈಗ ರಕ್ಷಿತ್ ಶೆಟ್ಟಿ ಕೂಡಾ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುತ್ತಿದ್ದು ಅಲ್ಲಿನ ಒಂದು ಫೋಟೋ ಹಂಚಿಕೊಂಡಿದ್ದಾರೆ. '777 ಚಾರ್ಲಿ' ಚಿತ್ರಕ್ಕಾಗಿ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಬೇಕು ಎಂದು ರಕ್ಷಿತ್ ಹೇಳಿದ್ದರು. ಅದರಂತೆ ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವಲ್ಲಿ ನಿರತರಾಗಿದ್ದಾರೆ. ಕಾಶ್ಮೀರ ಪ್ರಕೃತಿಗೆ ಬೋಲ್ಡ್ ಆಗಿರುವ ರಕ್ಷಿತ್, ಒಂದು ಫೋಟೋ ಹಂಚಿಕೊಂಡು, ''ಕಾಶ್ಮೀರದ ಬಣ್ಣಗಳು ಶ್ರೀಮಂತಿಕೆ ಮತ್ತು ದೈವತ್ವ ಕಣ್ಣಿನಲ್ಲಿ ಪ್ರತಿಧ್ವನಿಸುತ್ತವೆ'' ಎಂದು ಬರೆದುಕೊಂಡಿದ್ದಾರೆ. ಈ ತಿಂಗಳ ಅಂತ್ಯದಲ್ಲಿ '777 ಚಾರ್ಲಿ' ಚಿತ್ರೀಕರಣ ಮುಗಿಯಲಿದೆ.
ಕಳೆದ ವಾರ ಕಾಶ್ಮೀರದಲ್ಲಿ 'ಏಕ್ ಲವ್ ಯಾ' ಚಿತ್ರೀಕರಣ ಮಾಡಿ ಮುಗಿಸಿದ್ದ ನಿರ್ದೇಶಕ ಪ್ರೇಮ್, ಇದೀಗ ರಾಜಸ್ಥಾನ್ಗೆ ಲೊಕೇಶನ್ ಶಿಫ್ಟ್ ಮಾಡಿದ್ದಾರೆ. ಕಾಶ್ಮೀರದಿಂದ ರಾಜಸ್ಥಾನಕ್ಕೆ ಹಾರಿರುವ ಅವರು, ಅಲ್ಲಿ ಒಂದು ಹಾಡಿನ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ರಾಜಸ್ಥಾನದಲ್ಲಿ ಹಾಡಿನ ಚಿತ್ರೀಕರಣ ಮುಗಿಸಿ ಅಲ್ಲಿಂದ ಮತ್ತೆ ಗುಜರಾತ್‍ಗೆ ಹೋಗಲಿರುವ ಪ್ರೇಮ್, ಅಲ್ಲಿ ಕೆಲವು ದಿನಗಳ ಕಾಲ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸಾಗುವ ಸಾಧ್ಯತೆ ಇದೆ.