ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ '777 ಚಾರ್ಲಿ' . ಸದ್ಯ ಪೋಸ್ಟರ್ ಹಾಗೂ ಮೇಕಿಂಗ್ನಿಂದ ಗಮನ ಸೆಳೆದಿರುವ ಚಾರ್ಲಿ, ಸೆನ್ಸಾರ್ನಲ್ಲಿ ಪಾಸ್ ಆಗಿದ್ದು, ಯು/ಎ ಸರ್ಟಿಫಿಕೆಟ್ ಪಡೆದುಕೊಂಡಿದೆ.
ಒಬ್ಬ ಮನುಷ್ಯನ ಬಾಳಲ್ಲಿ ಚಾರ್ಲಿ ಎಂಬ ನಾಯಿಯ ಆಗಮನದಿಂದ ಏನೆಲ್ಲ ಆಗುತ್ತೆ ಅನ್ನೋದು ಈ '777 ಚಾರ್ಲಿ' ಸಿನಿಮಾ ಸ್ಟೋರಿ. ಕಳೆದ ಎರಡು ವರ್ಷಗಳಿಂದ ಚಿತ್ರೀಕರಣ ಮುಗಿಸಿರುವ ಚಿತ್ರವು ಟೀಸರ್ ಹಾಗೂ ಹಾಡುಗಳಿಂದ ಸಖತ್ ಸದ್ದು ಮಾಡುತ್ತಿದೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತಾ ಶೃಂಗೇರಿ ತೆರೆ ಹಂಚಿಕೊಂಡಿದ್ದಾರೆ.
ರಾಜ್ ಬಿ. ಶೆಟ್ಟಿ, ಡ್ಯಾನಿಶ್ ಸೇಠ್, ಬಾಬಿ ಸಿಂಹ, ಬೇಬಿ ಶಾರ್ವರಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಬಾಬಿ ಸಿಂಹ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.