ಕರ್ನಾಟಕ

karnataka

ETV Bharat / sitara

ಬೆಳ್ಳಿತೆರೆಯಲ್ಲೂ ಅದೃಷ್ಟ ಪರೀಕ್ಷೆಗಿಳಿದ ಶುಂಠಿ ಶಂಕರ...ರಕ್ಷಿತ್ ಅಭಿನಯದ ಸಿನಿಮಾ ಯಾವುದು...? - ಸಿನಿಮಾದಲ್ಲಿ ರಕ್ಷಿತ್ ಗೌಡ ಅದೃಷ್ಟ ಪರೀಕ್ಷೆ

ಗಟ್ಟಿಮೇಳದ ವೇದಾಂತ್ ಆಗಿ ಅದೆಷ್ಟೋ ಹುಡುಗಿಯರ ಹೃದಯ ಕದ್ದ ಚಾಕೋಲೆಟ್​​​​​​​​​​​ ಹುಡುಗನ ಅಭಿನಯಕ್ಕೆ ಮನಸೋಲದವರಿಲ್ಲ. ಶುಂಠಿ ಶಂಕರ ಎಂದೇ ಜನಪ್ರಿಯವಾಗಿರುವ ರಕ್ಷಿತ್ 'ನರಗುಂದ ಬಂಡಾಯ' ಎಂಬ ಚಿತ್ರದಲ್ಲಿ ನಟಿಸಿದ್ದು ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದೆ.

Rakshit gowda
ರಕ್ಷಿತ್ ಗೌಡ

By

Published : Feb 28, 2020, 2:16 PM IST

'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಮಹೇಶನಾಗಿ ಹಾಗೂ ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಆಗಿ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ರಕ್ಷಿತ್ ಗೌಡ ಇದೀಗ ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ಕಮಾಲ್ ಮಾಡಲು ಹೊರಟಿದ್ದಾರೆ.

ರಕ್ಷಿತ್ ಗೌಡ

ಗಟ್ಟಿಮೇಳದ ವೇದಾಂತ್ ಆಗಿ ಅದೆಷ್ಟೋ ಹುಡುಗಿಯರ ಹೃದಯ ಕದ್ದ ಚಾಕೋಲೆಟ್​​​​​​​​​​​ ಹುಡುಗನ ಅಭಿನಯಕ್ಕೆ ಮನಸೋಲದವರಿಲ್ಲ. ಶುಂಠಿ ಶಂಕರ ಎಂದೇ ಜನಪ್ರಿಯವಾಗಿರುವ ರಕ್ಷಿತ್ 'ನರಗುಂದ ಬಂಡಾಯ' ಎಂಬ ಚಿತ್ರದಲ್ಲಿ ನಟಿಸಿದ್ದು ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದೆ. 'ಪುಟ್ಟಗೌರಿ ಮದುವೆ' ಧಾರಾವಾಹಿಯ ನಾಯಕ ಮಹೇಶ್ ಆಗಿ ಕನ್ನಡಿಗರ ಮನಗೆದ್ದಿದ್ದ ರಕ್ಷಿತ್​​​ ನಂತರ ವೇದಾಂತ್ ಆಗಿ ಬದಲಾಗಿದ್ದೇ ತಡ ಅವರಿಗೆ ಮಹಿಳಾ ಅಭಿಮಾನಿಗಳು ಹೆಚ್ಚಾದರು. ಅಭಿಮಾನಿಗಳು ರಕ್ಷಿತ್ ಅವರನ್ನು ಬೆಳ್ಳಿ ತೆರೆ ಮೇಲೆ ಕೂಡಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

'ನರಗುಂದ ಬಂಡಾಯ' ಚಿತ್ರದಲ್ಲಿ ಅಭಿನಯಿಸಿರುವ ರಕ್ಷಿತ್

ಅಭಿಮಾನಿಗಳು ಮಾತ್ರವಲ್ಲ ಸ್ವತ: ರಕ್ಷಿತ್ ಕೂಡಾ ಬೆಳ್ಳಿತೆರೆಯಲ್ಲಿ ತಮ್ಮನ್ನು ನೋಡಲು ಎಕ್ಸೈಟ್ ಆಗಿದ್ದಾರೆ. 'ನರಗುಂದ ಬಂಡಾಯ' ಸಿನಿಮಾ ನನ್ನ ಕನಸಿನ ಕೂಸು ಎಂದು ಹೇಳುವ ರಕ್ಷಿತ್ ಸಿನಿಮಾಗಾಗಿ ಧಾರಾವಾಹಿಗೂ ಬ್ರೇಕ್ ನೀಡಿದ್ದರು. ಬಯೋಪಿಕ್ ಸಿನಿಮಾ ಮಾಡುವುದು ಬಹಳ ಕಷ್ಟ. ಈ ಸಿನಿಮಾಗೆ ನಾನು ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಆ್ಯಕ್ಟಿಂಗ್​​​​​​​​ ಜೊತೆ ಟೆಕ್ನಿಕಲ್ ವಿಷಯಗಳಲ್ಲೂ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಪೋಸ್ಟ್ ಪ್ರೊಡಕ್ಷನ್​​​​​​​​​​​​​​ನಿಂದ ಹಿಡಿದು ಸಿನಿಮಾ ಮುಗಿಯುವವರೆಗೆ ಪ್ರತಿ ಹಂತವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ್ದೇನೆ ಎನ್ನುವ ರಕ್ಷಿತ್​​​​​​​ ಈ ವಾರಾಂತ್ಯದಲ್ಲಿ ನಡೆಯುವ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆಯಲ್ಲಿ ವೀಕ್ಷಕರನ್ನು ರಂಜಿಸಲು ಬರಲಿದ್ದಾರೆ. ಬೆಳ್ಳಿತೆರೆಯಲ್ಲಿ ಅದೃಷ್ಟದೇವತೆ ರಕ್ಷಿತ್ ಕೈ ಹಿಡಿಯುತ್ತಾಳಾ ಎಂಬುದನ್ನು ಕಾದುನೋಡಬೇಕು.

'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಮಹೇಶನಾಗಿ ಫೇಮಸ್

ABOUT THE AUTHOR

...view details