ಕರ್ನಾಟಕ

karnataka

ETV Bharat / sitara

ಡಿಸೆಂಬರ್​ 27ಕ್ಕೆ ಮುಖಾಮುಖಿಯಾಗ್ತಾರ ರಶ್ಮಿಕಾ-ರಕ್ಷಿತ್​​ ಶೆಟ್ಟಿ?

ಇದೀಗ ಸುದ್ದಿಯೊಂದು ಹರಿದಾಡುತ್ತಿದ್ದು, ಡಿಸೆಂಬರ್​ 27ಕ್ಕೆ ರಶ್ಮಿಕಾ ಮತ್ತು ಕಿರಿಕ್​ ಹುಡ್ಗ ರಕ್ಷಿತ್​ ಶೆಟ್ಟಿ  ಮುಖಾಮುಖಿಯಾಗುತ್ತಿದ್ದಾರೆ ಎಂಬ ಗಾಸಿಪ್​ ಜೋರಾಗಿದೆ. ಏನಿದು ಇದ್ದಕ್ಕಿದ್ದಂತೆ ಭೇಟಿಯಾಗ್ತಿದ್ದಾರೆ. ಯಾವ ವಿಚಾರಕ್ಕೆ ಮೀಟ್​ ಮಾಡ್ತಿದ್ದಾರೆ ಅಂತೀರ. ನಿಜವಾಗಿಯೂ ಇವರು ನೇರಾ ನೇರಾ ಭೇಟಿಯಾಗುತ್ತಿಲ್ಲ.

ರಶ್ಮಿಕಾ-ರಕ್ಷಿತ್​​

By

Published : Oct 23, 2019, 2:18 PM IST

ಕರ್ನಾಟಕದ ಕ್ರಶ್​​ ಆಗಿರುವ ರಶ್ಮಿಕಾ ಮದಣ್ಣ 'ಪೊಗರು' ಸಿನಿಮಾ ಪ್ರಮೋಷನ್​ಲಿ ಬ್ಯುಸಿಯಾಗಿದ್ದಾರೆ. 'ಕಿರಿಕ್​ ಪಾರ್ಟಿ' ಚಿತ್ರ ಇವರ ಸಿನಿ ಜರ್ನಿಯನ್ನೇ ಬದಲಾಯಿಸಿತು. ಈ ಚಿತ್ರ ಯಶಸ್ಸು ಕಂಡ ಮೇಲೆ ತೆಲುಗು, ತಮಿಳಿನಲ್ಲಿ ರಶ್ಮಿಕಾಗೆ ಅವಕಾಶಗಳು ಸಿಗುತ್ತಲೆ ಹೋದವು.

ಈ ಹಿಂದೆ ರಶ್ಮಿಕಾ ಮತ್ತು ರಕ್ಷಿತ್​ ಶೆಟ್ಟಿ ನಡುವೆ ನಿಶ್ಚಿತಾರ್ಥವಾಗಿ ಮದುವೆ ಹಂತದವರೆಗೆ ಮಾತುಕತೆಯಾಗಿ ಮುರಿದು ಬಿದ್ದಿರುವುದು ತುಂಬಾ ಹಳೆ ವಿಷಯ. ಮದುವೆ ಮುರಿದು ಬಿದ್ದ ಮೇಲೆ ರಕ್ಷಿತ್​ ಶೆಟ್ಟಿ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಆದ್ರೆ ರಶ್ಮಿಕಾ ಮಾತ್ರ ಬ್ಯಾಕ್​ ಟು ಬ್ಯಾಕ್​​​ ಸಿನಿಮಾ ಮಾಡಿ ಸೈ ಅನಿಸಿಕೊಳ್ಳುತ್ತಿದ್ದಾರೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ತೆಲುಗಿನ ಸ್ಟಾರ್​ ವಿಜಯ್​ ದೇವರಕೊಂಡ ಜೊತೆ 'ಗೀತ ಗೋವಿಂದಂ' ಸಿನಿಮಾದಲ್ಲಿ ನಟಿಸಿದ್ದು, ಸೂಪರ್ ಹಿಟ್​ ಆಗಿತ್ತು. ಇದ್ರ ಜೊತೆಗೆ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಜೊತೆ ಸಂಬಂಧ ಇದೆ ಎಂಬ ಗಾಳಿ ಸುದ್ದಿಯೂ ಹರಿದಾಡಿತ್ತು. ​​

ಇದೀಗ ಸುದ್ದಿಯೊಂದು ಹರಿದಾಡುತ್ತಿದ್ದು, ಡಿಸೆಂಬರ್​ 27ಕ್ಕೆ ರಶ್ಮಿಕಾ ಮತ್ತು ಕಿರಿಕ್​ ಹುಡ್ಗ ರಕ್ಷಿತ್​ ಶೆಟ್ಟಿ ಮುಖಾಮುಖಿಯಾಗುತ್ತಿದ್ದಾರೆ ಎಂಬ ಗಾಸಿಪ್​ ಜೋರಾಗಿದೆ. ಏನಿದು ಇದ್ದಕ್ಕಿದ್ದಂತೆ ಭೇಟಿಯಾಗ್ತಿದ್ದಾರೆ. ಯಾವ ವಿಚಾರಕ್ಕೆ ಮೀಟ್​ ಮಾಡ್ತಿದ್ದಾರೆ ಅಂತೀರ. ನಿಜವಾಗಿಯೂ ಇವರು ನೇರಾ ನೇರಾ ಭೇಟಿಯಾಗುತ್ತಿಲ್ಲ.

ಕಿರಿಕ್​ ಪಾರ್ಟಿ

ಈ ಡಿಸೆಂಬರ್​ 27ಕ್ಕೆ ರಕ್ಷಿತ್​ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಸಿನಿಮಾ ತೆರೆಗೆ ಬರಲಿದೆ. ಈ ವಿಷಯವನ್ನು ಸ್ವತಃ ರಕ್ಷಿತ್​ ಶೆಟ್ಟಿ ಪ್ರಕಟ ಮಾಡಿದ್ರು. ಹಾಗೂ ರಶ್ಮಿಕಾ ಮತ್ತು ಧ್ರುವ ನಟನೆಯ ಪೊಗರು ಸಿನಿಮಾ ಕೂಡ ಇದೇ ಡಿಸೆಂಬರ್​​ 27ಕ್ಕೆ ತೆರೆಗೆ ಅಪ್ಪಳಿಸಲಿದೆ ಎನ್ನಲಾಗಿದೆ. ಹೀಗಂತ ಕಾರ್ಯಕ್ರವೊಂದರಲ್ಲಿ ಪೊಗರು ನಿರ್ದೇಶಕ ನಂದ ಕಿಶೋರ್​​ ತಿಳಿಸಿದ್ರು.

ಕಿರಿಕ್​ ಮಾರ್ಟಿ ನಟರು

ಸದ್ಯ ಕಿರಿಕ್​ ಹುಡ್ಗ-ಹುಡ್ಗಿ ನಟಿಸಿರುವ ಈ ಎರಡೂ ಸಿನಿಮಾಗಳು ಒಂದೇ ದಿನ ತೆರೆ ಕಂಡರೆ ಪ್ರೇಕ್ಷಕ ಮಹಾಶಯ ಯಾರ ಕಡೆ ಒಲವು ತೋರುತ್ತಾನೆ ಅನ್ನೋದೆ ಈಗಿರುವ ಕುತೂಹಲ.

ABOUT THE AUTHOR

...view details