ನಿನ್ನೆ ಬಿಡುಗಡೆಯಾಗಿರುವ ನರಗುಂದ ಬಂಡಾಯ ಸಿನಿಮಾದ ಮೂಲಕ ಕನ್ನಡಕ್ಕೆ ಮತ್ತೊಬ್ಬ ನಾಯಕ ನಟ ಸಿಕ್ಕಿದ್ದಾನೆ. ಅವನೇ ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕನ ಪಾತ್ರ ಮಾಡಿದ್ದ ರಕ್ಷಿತ್.
ಸದ್ಯ ಬಿಡುಗಡೆಯಾಗಿರುವ ನರಗುಂದ ಬಂಡಾಯ ಚಿತ್ರ 1980ರಲ್ಲಿ ನಡೆದ ಘಟನೆ ಆಧಾರಿತವಾಗಿದೆ. ಚಿತ್ರದಲ್ಲಿ ರಕ್ಷಿತ್ನದ್ದು ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಪಾತ್ರ. ಇನ್ನು ಸಿನಿಮಾದ ಟೈಟಲ್ ಸಾಂಗ್ನಲ್ಲಿಯೂ ರಕ್ಷಿತ್ ರೋಷದಲ್ಲಿಯೇ ಮಿಂಚಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಕನ್ನಡ ಭಾಷೆಯಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ರಕ್ಷ್ ಗಮನ ಸೆಳೆಯುತ್ತಾರೆ.