ಚಾರ್ಲಿ 777 ಸಿನಿಮಾ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರೋ ನಿರೀಕ್ಷಿತ ಚಿತ್ರ. ಬರೋಬ್ಬರಿ ಎರಡು ವರ್ಷಗಳಿಂದ ರೆಡಿಯಾಗುತ್ತಿರೋ ಚಾರ್ಲಿ 777 ಚಿತ್ರದ ಟೀಸರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿತ್ತು. ಸದ್ಯ ಚಾರ್ಲಿ 777 ಸಿನಿಮಾದ ಟೀಸರ್ ಅನ್ನ 40 ಲಕ್ಷ ಜನ ನೋಡಿದ್ದಾರೆ. ಆದರೆ ಒಂದೂ ಡೈಲಾಗ್ ಇಲ್ಲದೇ ಕೇವಲ ನಾಯಿಯನ್ನು ಬಳಸಿಕೊಂಡು, ಚಾರ್ಲಿ 777 ಸಿನಿಮಾದ ಟೀಸರ್ ಮಾಡಲಾಗಿದೆ.
ಮೊದಲು ಮಾನವರಾಗೋಣ.. ರಶ್ಮಿಕಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ರಕ್ಷಿತ್ ಶೆಟ್ಟಿ ಕ್ಲಾಸ್ - charlie 777 cenema
ಚಾರ್ಲಿ 777 ಸಿನಿಮಾದ ಟೀಸರ್ ಬಿಡುಗಡೆ ನಂತರ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದ ವ್ಯಕ್ತಿಗೆ ನಟ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಬುದ್ಧಿ ಹೇಳಿದ್ದಾರೆ.
ಇದನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಮತ್ತೆ ಕೆಲವರು ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಬ್ರೇಕ್ ಅಪ್ ವಿಚಾರವನ್ನು ಎಳೆದು ತಂದಿದ್ದು, 'ಒಂದು ನಾಯಿಯನ್ನು ಫೇಮಸ್ ಮಾಡಿದವರಿಗೆ ಈ ನಾಯಿಯನ್ನು ಫೇಮಸ್ ಮಾಡುವುದು ಕಷ್ಟವಲ್ಲ ಬಿಡಿ’ ಎಂದು ಪೋಸ್ಟ್ ಮಾಡಲಾಗಿದೆ. ಈ ಫೋಸ್ಟ್ ನೋಡಿದ ರಕ್ಷಿತ್ ಶೆಟ್ಟಿ ಫುಲ್ ಗರಂ ಆಗಿದ್ದು, ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದರು. ರಶ್ಮಿಕಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಬುದ್ಧಿ ಹೇಳಿದ್ದಾರೆ.
ಕೆಲ ಜನರು ಕೆಲವೊಂದು ಬೇಸರ ಹುಟ್ಟಿಸುವ ಕಾಮೆಂಟ್ ಮಾಡುತ್ತಿದ್ದಾರೆ. ಇದು ನನ್ನ ಬಗ್ಗೆ ಅಲ್ಲ, ಬೇರೆಯವರ ಬಗ್ಗೆ. ಹಳೆಯದನ್ನು ಅಲ್ಲಿಗೇ ಬಿಟ್ಟುಬಿಡಿ. ಅದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಯಾವುದೇ ವ್ಯಕ್ತಿಯನ್ನು ಅಗೌರವದಿಂದ ಕಾಣುವುದು ಬೇಡ. ಎಲ್ಲರಿಗೂ ಅವರದ್ದೇ ಆದ ಜೀವನವಿದೆ. ಅದನ್ನು ಗೌರವಿಸೋಣ. ನಮ್ಮ ಬಗ್ಗೆಯೇ ನಾವು ಅಸಹ್ಯ ಪಡುವ ಹಾಗೆ ಕಾಮೆಂಟ್ ಮಾಡುವುದು ಸರಿಯಲ್ಲ. ಎಲ್ಲರೂ ಮೊದಲು ಮಾನವರಾಗೋಣ ಅಂತಾ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಹೇಳಿದ್ದಾರೆ.